Shikhar Dhawan : ಅಯ್ಯೋ ಪಾಪ ಶಿಖರ್ ಧವನ್..
ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಇನ್ ಸ್ಟಾಗ್ರಾಮ್ ನಲ್ಲಿ 11 ಮಿಲಿಯನ್ ಫಾಲೋವರ್ಸ್ ಹೊಂದಿರುವ ಗಬ್ಬರ್ ನಿರಂತರವಾಗಿ ಕೆಲವೊಂದು ತಮಾಷೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಲೇ ಇರುತ್ತಾರೆ. ಇದೇ ಇದೀಗ ಗಬ್ಬರ್ ಇದೀಗ ವಿಡಿಯೋವೊಂದು ಹಂಚಿಕೊಂಡಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಶಿಖರ್ ಧವನ್ ಐಪಿಎಲ್-2022ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಈ ಆವತ್ತಿಯಲ್ಲಿ 14 ಇನ್ನಿಂಗ್ಸ್ ಆಡಿರುವ ಗಬ್ಬರ್ 460 ರನ್ ಗಳಿಸಿದ್ದಾರೆ. (ಹೆಚ್ಚಿನ ಸ್ಕೋರ್ 88- ಔಟಾಗದೆ).
ಆದರೆ, ಧವನ್ ಬ್ಯಾಟ್ಸ್ ಮನ್ ಆಗಿ ಯಶಸ್ಸು ಕಂಡರೂ ಅವರ ತಂಡ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಹದಿನಾಲ್ಕು ಪಂದ್ಯಗಳಲ್ಲಿ ಕೇವಲ ಏಳನ್ನು ಗೆದ್ದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದೆ.
ಈ ಬಾರಿಯೂ ಪ್ಲೇಆಫ್ ತಲುಪದೆ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ನ ಹಲವು ಆಟಗಾರರು ಈಗಾಗಲೇ ತವರಿಗೆ ತಲುಪಿದ್ದಾರೆ.
ಅದರಂತೆ ಗಬ್ಬರ್ ಮನೆಗೆ ಹೋಗಿದ್ದು, ತಮಾಷೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನಾಕೌಟ್ ಗೆ ಹೋಗದೇ ಮನೆಗೆ ವಾಪಸ್ ಆಗಿದ್ದಕ್ಕೆ ಧವನ್ ತಂದೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ ಯದ್ವಾತದ್ವಾ ಹೊಡೆದಿದ್ದಾರೆ.shikhar-dhawan-gets-knocked-out-father-video-goes-viral