IPL 2022 : ಐಪಿಎಲ್ ನಲ್ಲಿ ಮೊಹ್ಮದ್ ಸಿರಾಜ್ ಕೆಟ್ಟ ದಾಖಲೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ ಮೊಹಮ್ಮದ್ ಸಿರಾಜ್ ಐಪಿಎಲ್‌ನಲ್ಲಿ ಅತ್ಯಂತ ಕೆಟ್ಟ ದಾಖಲೆ ನಮೂದಿಸಿದ್ದಾರೆ.
ಸಿರಾಜ್ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಐಪಿಎಲ್-2022 ಸೀಸನ್‌ನಲ್ಲಿ 30 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿರುವ ಸಿರಾಜ್, ತಮ್ಮ ಖಾತೆಯಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ 2018ರ ಋತುವಿನಲ್ಲಿ ಡ್ವೇನ್ ಬ್ರಾವೋ 29 ಸಿಕ್ಸರ್ ಗಳನ್ನು ಬಿಟ್ಟುಕೊಟ್ಟಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ಡ್ವೇನ್ ಬ್ರಾವೋ ಐಪಿಎಲ್ 2018 ರಲ್ಲಿ ಒಟ್ಟು 29 ಸಿಕ್ಸರ್‌ಗಳನ್ನು ನೀಡಿದ್ದರು.
ಬ್ರಾವೋ ಮೊದಲು ಈ ದಾಖಲೆ ಯುಜ್ವೇಂದ್ರ ಚಹಾಲ್ ಹೆಸರಿನಲ್ಲಿತ್ತು.
2015ರ ಐಪಿಎಲ್‌ನಲ್ಲಿ ಚಹಾಲ್ 28 ಸಿಕ್ಸರ್‌ಗಳನ್ನು ನೀಡಿದ್ದರು.
ಲಕ್ನೋ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ವನಿಂದು ಹಸರಂಗ 28-28 ಸಿಕ್ಸರ್‌ಗಳೊಂದಿಗೆ ಚಹಾಲ್ ದಾಖಲೆಯನ್ನು ಸರಿಗಟ್ಟಿದ್ದರು.
ಇದೀಗ ಈ ಲೀಸ್ಟ್ ನಲ್ಲಿ ಮೊಹ್ಮದ್ ಸಿರಾಜ್ ಮೊದಲನೇ ಸ್ಥಾನದಲ್ಲಿದ್ದಾರೆ. ipl-2022-siraj-becomes-conceded-most-sixes-ipl-edition








