Dale Steyn | ಭಾರತ ತಂಡ ವಿಶ್ವಕಪ್ ಗೆಲ್ಲಬೇಕಾದ್ರೆ ಆತ ಇರಲೇಬೇಕು
ಮೂರು ವರ್ಷಗಳ ನಂತರ ಭಾರತ ತಂಡದ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ತಂಡ ಸೇರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಕಾರ್ತಿಕ್, ಟೀಂ ಇಂಡಿಯಾದ ಅತ್ಯುತ್ತಮ ಫಿನಿಶರ್ ಆಗಿ ಮಿಂಚುತ್ತಿದ್ದಾರೆ.
ಅದೇ ರೀತಿ ಈ ವರ್ಷದ ಐಪಿಎಲ್ ನಲ್ಲಿ ಕಾರ್ತಿಕ್ ಅದ್ಭುತ ಆಟವಾಡಿದ್ರು. ಐಪಿಎಲ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಕಾರ್ತಿಕ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದು ಅದೇ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.
ಆದರೆ, ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಕಾರ್ತಿಕ್ ಅವರನ್ನು ಆಯ್ಕೆ ಮಾಡಬೇಕು ಎಂದು ಮಾಜಿ ಹಾಗೂ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಸಾಲಿಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡೇಲ್ ಸ್ಟೇಯ್ನ್ ಕೂಡ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ಪಾರ್ಮ್ ನೋಡಿದ್ರೆ ರಿಷಬ್ ಪಂತ್‌ಗಿಂತ ಕಾರ್ತಿಕ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಸ್ಟೈನ್ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಟೀಂ ಇಂಡಿಯಾ ವಿಕೆಟ್ ಕೀಪರ್ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಸಿಸಿಐ ಟಿ20 ವಿಶ್ವಕಪ್‌ಗೆ ಇಬ್ಬರು ವಿಕೆಟ್‌ಕೀಪರ್‌ಗಳನ್ನು ಮಾತ್ರ ಆಯ್ಕೆ ಮಾಡುವ ಸಾಧ್ಯತೆಯಿದೆ. ಇವರಲ್ಲಿ ಆರಂಭಿಕರಾಗಿ ಇಶಾನ್ ಕಿಶನ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ.
ಅದೇ ರೀತಿ ಕಿಶನ್ ತಂಡದಲ್ಲಿ ಬ್ಯಾಕಪ್ ಓಪನರ್ ಆಗಿ ಆಯ್ಕೆಯಾಗಬಹುದು. ಪಂತ್ ಅಥವಾ ಕಾರ್ತಿಕ್ ಫಿನಿಶರ್ ಆಗಿ ಆಡುವ ಅವಕಾಶ ಹೊಂದಿರುತ್ತಾರೆ. ಆದರೆ, ಪ್ರಸಕ್ತ ಸರಣಿಯಲ್ಲಿ ಪಂತ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ..
“ಪ್ರಸ್ತುತ ಸರಣಿಯಲ್ಲಿ ಪಂತ್ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಅವರು ಮಾಡಿದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುತ್ತಿದ್ದಾರೆ ಮತ್ತು ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ.
ಆದರೆ, ಕಾರ್ತಿಕ್ ಸಿಕ್ಕ ಅವಕಾಶವನ್ನೆಲ್ಲ ಬಳಸಿಕೊಳ್ಳುತ್ತಿದ್ದಾರೆ. ಕಾರ್ತಿಕ್ ಕ್ಲಾಸ್ ಪ್ಲೇಯರ್. ಭಾರತ ವಿಶ್ವಕಪ್ ಗೆಲ್ಲಬೇಕಾದರೆ ಅವರು ತಂಡದಲ್ಲಿರಬೇಕು. ಏಕೆಂದರೆ ಕಾರ್ತಿಕ್ ಇದೀಗ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ಸ್ಟೈನ್ ಹೇಳಿದ್ದಾರೆ.








