My Dear Bootham : ‘ಮೈ ಡಿಯರ್ ಭೂತಂ’ ಎನ್ನುತ್ತಿದ್ದಾರೆ ಪ್ರಭುದೇವ
‘ಮೈ ಡಿಯರ್ ಭೂತಂ’ ಎನ್ನುತ್ತಿದ್ದಾರೆ ಪ್ರಭುದೇವ. ಇದು ಅವರು ನಾಯಕನಾಗಿ ನಟಿಸುತ್ತಿರುವ ಇತ್ತೀಚಿನ ಚಿತ್ರದ ಶೀರ್ಷಿಕೆ.
ಎನ್. ರಾಘವನ್ ನಿರ್ದೇಶನದ ರಮೇಶ್ ಪಿ. ಪಿಳ್ಳೈ ನಿರ್ಮಿಸಿರುವ ಈ ತಮಿಳು ಚಿತ್ರವನ್ನು ತೆಲುಗಿನಲ್ಲಿ ಶ್ರೀಲಕ್ಷ್ಮಿ ಜ್ಯೋತಿ ಕ್ರಿಯೇಷನ್ಸ್ ಮುಖ್ಯಸ್ಥ ಎಎನ್ ಬಾಲಾಜಿ ಬಿಡುಗಡೆ ಮಾಡುತ್ತಿದ್ದಾರೆ. ಶನಿವಾರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

‘ಈ ಫ್ಯಾಂಟಸಿ ಚಿತ್ರದಲ್ಲಿ ಪ್ರಭುದೇವ ಅವರು ಜೀನಿ ಪಾತ್ರದಲ್ಲಿ ನಟಿಸಿದ್ದಾರೆ.
ಈ ಪಾತ್ರಕ್ಕಾಗಿ ಅವರು ವಿಶೇಷ ಮೇಕ್ ಓವರ್ ಆಗಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ ಎಂದು ಚಿತ್ರತಂಡ ಹೇಳಿದೆ. ಚಿತ್ರದಲ್ಲಿ ರಮ್ಯಾ ನಂಬೀಸನ್ ಮುಖ್ಯ ಭೂಮಿಕೆಯಲ್ಲಿದ್ದಾರೆ.







