Mega 154 Movie Update : ಸಂಕ್ರಾಂತಿಗೆ ಚಿರು ಸಿನಿಮಾ ತೆರೆಗೆ
ಮೆಗಾಸ್ಟಾರ್ ಚಿರಂಜೀವಿ ಪ್ರಸ್ತುತ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚಿಗೆ ಆಚಾರ್ಯ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಹಾಯ್ ಹೇಳಿದ್ದ ಚಿರು, ಸದ್ಯ ಭೋಳಾ ಶಂಖರ್, ಗಾಡ್ ಫಾದರ್ ಸಿನಿಮಾಗಳ ಜೊತೆ ನಿರ್ದೇಶಕ ಬಾಬಿ ನಿರ್ದೇಶನದ ಒಂದು ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಹೀಗಾಗಿ ಚಿರು ಒಂದೇ ಕಾಲದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಈ ಕ್ರಮದಲ್ಲಿ ಮೆಗಾ 154 ಪ್ರಾಜೆಕ್ಟ್ ಆಗಿ ಸೆಟ್ಟೇರಿರುವ ಬಾಬಿ ಸಿನಿಮಾದ ಆಸಕ್ತಿಕರ ಅಪ್ ಡೇಟ್ ಕೊಟ್ಟಿದ್ದಾರೆ.
ಇಲ್ಲಿಯವರೆಗೂ ಟೈಟಲ್ ಫಿಕ್ಸ್ ಆಗಿರದ ಸಿನಿಮಾ ಸಾಂಕ್ರಾಂತಿಗೆ ಬರಲಿದೆ ಎಂದು ನಿರ್ದೇಶಕರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಸಂಕ್ರಾಂತಿಗೆ ಮೀಟ್ ಮಾಡೋಣ ಅಂತಾ ಬಾಬಿ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಈ ಸಿನಿಮಾಗೆ ವಾಲ್ತೇರು ವೀರಯ್ಯ ಅನ್ನೋ ಟೈಟಲ್ ಫಿಕ್ಸ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮುಠಾ ಮೇಸ್ತ್ರಿ ಯಂತಹ ಮಾಸ್ ಪ್ಲೇವರ್ ನಲ್ಲಿ ಈ ಸಿನಿಮಾದಲ್ಲಿ ಚಿರು ಕಾಣಿಸಿಕೊಳ್ಳಲಿದ್ದಾರಂತೆ.
ಈ ಸಿನಿಮಾದಲ್ಲಿ ಚಿರು ಅಂಡರ್ ಕವರ್ ಆಫೀಸರ್ ಆಗಿ ಮಿಂಚಿದ್ದರಂತೆ.
ಈ ಸಿನಿಮಾದಲ್ಲಿ ಶೃತಿ ಹಾಸನ್ ನಾಯಕಿಯಾಗಿದ್ದಾರೆ.
ಮಾಸ್ ಮಹಾರಾಜ ರವಿತೇಜ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೈತ್ರಿ ಮ್ಯೂವಿ ಮೇಕರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.