IND vs LEI : ಕೊಹ್ಲಿ, ಶ್ರೇಯಸ್, ಜಡೇಜಾ ಅರ್ಧಶತಕ
ಲೀಸೆಸ್ಟರ್ಶೈರ್ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದ ಲಾಭವನ್ನು ಭಾರತೀಯ ಬ್ಯಾಟ್ಸ್ಮನ್ಗಳು ಪಡೆದುಕೊಳ್ಳುತ್ತಿದ್ದಾರೆ.
ನಾಲ್ಕು ದಿನಗಳ ಪಂದ್ಯದ ಮೂರನೇ ದಿನವಾದ ಶನಿವಾರ ಭಾರತದ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ (98 ಎಸೆತಗಳಲ್ಲಿ 67; 5 ಬೌಂಡರಿ, 2 ಸಿಕ್ಸರ್),
ಶ್ರೇಯಸ್ ಅಯ್ಯರ್ (89 ಎಸೆತಗಳಲ್ಲಿ 62; 11 ಬೌಂಡರಿ) ಮತ್ತು ರವೀಂದ್ರ ಜಡೇಜಾ (77 ಎಸೆತಗಳಲ್ಲಿ 56; 10 ಬೌಂಡರಿಗಳು) ಅರ್ಧಶತಕಗಳಿಂದ ಮಿಂಚಿದ್ದಾರೆ.
80/1 ಓವರ್ನೈಟ್ ಸ್ಕೋರ್ನೊಂದಿಗೆ ಎರಡನೇ ಇನ್ನಿಂಗ್ಸ್ ಮುಂದುವರಿಸಿದ ಭಾರತ, ಆಟದ ಅಂತ್ಯದ ವೇಳೆಗೆ 92 ಓವರ್ಗಳಲ್ಲಿ 7 ವಿಕೆಟ್ಗೆ 364 ರನ್ ಗಳಿಸಿತು.
ಶ್ರೀಕರ್ ಭರತ್ (98 ಎಸೆತಗಳಲ್ಲಿ 43; 7 ಬೌಂಡರಿ) ಮತ್ತು ಹನುಮ ವಿಹಾರಿ (55 ಎಸೆತಗಳಲ್ಲಿ 20; 2 ಬೌಂಡರಿ) ಕೂಡ ಮಿಂಚಿದರು.
ಲೀಸೆಸ್ಟರ್ಶೈರ್ ಪ್ರತಿನಿಧಿಸಿದ ಭಾರತದ ಬೌಲರ್ಗಳಲ್ಲಿ ನವದೀಪ್ ಸೈನಿ ಮೂರು ಮತ್ತು ಕಮಲೇಶ್ ನಾಗರಕೋಟಿ ಎರಡು ವಿಕೆಟ್ ಪಡೆದಿದ್ದಾರೆ.