Bangalore | ಕೆಂಪೇಗೌಡರು ಯಾರದ್ದೋ ಒಬ್ಬರ ಸ್ವತ್ತಲ್ಲ
ಬೆಂಗಳೂರು : 513ನೇ ನಾಡಪ್ರಭು ಕೆಂಪೇಗೌಡರ ಜಯಂತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರಾದ ಆರ್ ಅಶೋಕ್, ಅಶ್ವಥ್ ನಾರಾಯಣ್, ಮುನಿರತ್ನ, ಗೋಪಾಲಯ್ಯ, ಸುನೀಲ್ ಕುಮಾರ್, ರಾಜ್ಯಸಭೆ ಸದಸ್ಯ ಜಗ್ಗೇಶ್, ಸಂಸದ ತೇಜಸ್ವಿ ಸೂರ್ಯ, ಶಾಸಕ ರಿಜ್ವಾನ್ ಅರ್ಷದ್, ಪರಿಷತ್ ಸದಸ್ಯ ಗೋವಿಂದ ರಾಜ್, ಮಾಜಿ ಸಿಎಂ ಎಸ್ ಎಂ ಕೃಷ್ಣ, ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ, ಕ್ರೀಡಾಪಟು ಪ್ರಕಾಶ್ ಪಡುಕೋಣೆ ಭಾಗಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಎಸ್ ಎಂ ಕೆ, ಕೆಂಪೇಗೌಡ ಜಯಂತಿ ಯನ್ನು ವೈಭವದಿಂದ ಆಚರಣೆ ಮಾಡ್ತಿರೋದಕ್ಕೆ ಸರ್ಕಾರಕ್ಕೆ ಅಭಿನಂದನೆ. ಕೆಂಪೇಗೌಡ ಅವ್ರು ನಮ್ಮ ದೇಶದ ಅತ್ಯಂತ ಹಿರಿಯ ಸ್ವಾತಂತ್ರ್ಯ ಯೋಧರಾಗಿದ್ದಾರೆ. ಅವರು ತಮ್ಮ ಪ್ರಭುತ್ವ ಅವಧಿಯಲ್ಲಿ ಬೆಂಗಳೂರನ್ನು ಸುಂದರವನ್ನಾಗಿ ಮಾಡಲು ಕೆಲಸ ಮಾಡಿದ್ರು. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಅವ್ರ ಹೆಸರು ಇಡಲು ತೀರ್ಮಾನ ಮಾಡಿದ್ರು. ಅದಕ್ಕಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನಾಡ ಪ್ರಭು ಕೆಂಪೇಗೌಡ ಬೆಂಗಳೂರಿನ ನಿರ್ಮಾಣಕರ್ತೃರು. ಬೆಂಗಳೂರಿಗೆ ಒಂದು ದೊಡ್ಡ ಕನಸ್ಸನ್ನು ಅವ್ರು ಹೊಂದಿದ್ರು. ಆ ಕನಸ್ಸನ್ನು ನನಸ್ಸು ಮಾಡಲು ಆ ಮೇಲೆ ಬಂದ ಎಲ್ಲಾ ಸರ್ಕಾರಗಳು, ತಮ್ಮದೇ ಆದ ಕೊಡಗು ಕೊಟ್ಟಿದ್ದಾರೆ. ಕೆಂಪೇಗೌಡ ಅವರು ಯಾರದ್ದೋ ಒಬ್ಬರ ಸ್ವತ್ತಲ್ಲ. ಎಲ್ಲ ಜನಾಂಗಕ್ಕೂ ಕೆಂಪೇಗೌಡ ರು ಸೇರಿದವರು ಎಂದು ತಿಳಿಸಿದರು.
ನಾನು ಸಿಎಂ ಆಗಿದ್ಸಾಗ ಹೈದರಾಬಾದ್ ಗೂ ನಮಗೂ ಪ್ರಬಲ ಪೈಪೋಟಿ ನಡೆತ್ತಿತ್ತು. ಆ ಪೈಪೋಟಿ ಯಿಂದಲೇ ಬೆಂಗಳೂರು ಹಬ್ ನಗರವಾಗಿ ಮಾರ್ಪಟ್ಟಿತ್ತು. ಬೆಂಗಳೂರು ನಗರವನ್ನು ಸಿಲಿಕಾನ್ ಹಬ್ ಆಗಲು, ನಾರಯಣಮೂರ್ತಿ,ಸುಧಾಮೂರ್ತಿ ಅವರ ಸಲಹೆ ಪ್ರಮುಖ ವಾಗಿದೆ. ಭಾರತವನ್ನು ಬೆಂಗಳೂರಿನ ಮೂಲಕ ಬೇರೆ ದೇಶದ ಜನರು ನೋಡ್ತಿದ್ರು ಅಂತಾ ಮನಮೋಹನ್ ಸಿಂಗ್ ಹೇಳಿದ್ರು. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಧಾರವಾಡ ಗುಲ್ಬರ್ಗ ಇನ್ನೂ ಬೆಳೆಯಬೇಕು ಎಂದು ಹೇಳಿದರು.








