Sakaleshpur | ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿ ಸಾವು
ಸಕಲೇಶಪುರ : ತಾಲೂಕಿನಲ್ಲಿ ಕಾಡಾನೆ – ಮಾನವ ನಡುವಿನ ಸಂಘರ್ಷ ಮುಂದುವರೆದಿದ್ದು, ಕಾಡಾಣೆ ದಾಳಿಗೆ ವ್ಯಕ್ತಿ ಮೃತಪಟ್ಟಿದ್ದಾರೆ.
67 ವರ್ಷದ ಕೃಷ್ಣೆಗೌಡ ಮೃತ ದುರ್ದೈವಿಯಾಗಿದ್ದಾರೆ. ಸಕಲೇಶಪುರ ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕೃಷ್ಣೆಗೌಡ ಮಗ ಸುಧೀಶ್, ಮೊಮ್ಮಗ ಪ್ರಥಮ ಜೊತೆ ತೋಟಕ್ಕೆ ತೆರಳಿದ್ದರು. ಆಗ ಏಕಾಏಕಿ ಮೂರು ಕಾಡಾನೆಗಳು ದಾಳಿ ಮಾಡಿವೆ.
ಈ ಸಂದರ್ಭದಲ್ಲಿ ಸುಧೀಶ್ ಹಾಗೂ ಪ್ರಥಮ್ ಓಡಿ ಹೋಗಿ ಕಾಡಾನೆಗಳಿಂದ ತಪ್ಪಿಸಿಕೊಂಡಿದ್ದಾರೆ.
ಇತ್ತ ಕಾಡಾನೆಗಳ ದಾಳಿಗೆ ಕೃಷ್ಣೆಗೌಡ ಸಿಕ್ಕಿ ಕೊನೆಯುಸಿರೆಳೆದಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನು ಕಾಡಾನೆ ಹಾವಳಿ ಹೆಚ್ಚಿದ ಹಿನ್ನಲೆ ಎರಡು ಗಂಡಾನೆ ಹಿಡಿದು ಸ್ಥಳಾಂತರ ಹಾಗೂ ಎರಡು ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಸಲು ಅನುಮತಿ ಸರ್ಕಾರ ನೀಡಿದೆ.
ಬುಧವಾರ ಮಕನ ಆನೆ ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿತ್ತು.
ನಿನ್ನೆ ಇಡೀ ದಿನ ಪುಂಡಾನೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿ ವಿಫಲವಾಗಿತ್ತು.
ಇಂದು ನರಹಂತಕ ಕಾಡಾನೆಗೆ ಸೆರೆ ಕಾರ್ಯಾಚರಣೆ ನಡೆಸುತ್ತಿರುವಾಗಲೇ ಕಾಡಾನೆ ದಾಳಿಗೆ ಸಿಕ್ಕಿ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ.








