Ravindra Jadeja | ಟೆಸ್ಟ್ ನಲ್ಲಿ ಮೂರನೇ ಶತಕ ಸಿಡಿಸಿದ ಜಡ್ಡು
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕಳಫೆ ಪ್ರದರ್ಶನ ನೀಡಿ ಟೀಕೆಗಳಿಗೆ ಗುರಿಯಾಗಿದ್ದ ಆಲ್ ರೌಂಡರ್ ರವೀಂದ್ರ ಜಡೇಜಾ ಗ್ರೇಟ್ ಕಂ ಬ್ಯಾಕ್ ಮಾಡಿದ್ದಾರೆ.
ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಅಮೋಘ ಶತಕ ದಾಖಲಿಸಿದ್ದಾರೆ.
ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಜೊತೆಗೆ ದ್ವಿಶತಕದ ಜೊತೆಯಾಟವಾಡಿದ್ದ ಜಡೇಜಾ, ಎರಡನೇ ದಿನದಾಟದಲ್ಲಿ ಬಿರುಸಿನ ಆಟವಾಡಿ ಮೂರಂಕಿ ಗಡಿ ದಾಟಿದ್ದಾರೆ.
ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಜಡೇಜಾ ಸಿಡಿಸಿದ ಮೂರನೇ ಶತಕವಾಗಿದೆ.
ಅಂದಹಾಗೆ ಜಡೇಜಾ 92 ರನ್ ಗಳಿಸಿದ್ದಾಗ ಮ್ಯಾಟಿ ಪಾಟ್ಸ್ ಬೌಲಿಂಗ್ ನಲ್ಲಿ ಜೀವದಾನ ಪಡೆದುಕೊಂಡರು.

ಇದರ ಲಾಭ ಪಡೆದ ಜಡ್ಡು 183 ಎಸೆತಗಳಲ್ಲಿ ಸೆಂಚೂರಿ ಸಿಡಿಸಿ ಮಿಂಚಿದರು.
ಜಡೇಜಾ ಇನ್ನಿಂಗ್ಸ್‌ನಲ್ಲಿ 13 ಬೌಂಡರಿಗಳು ಸಹ ಒಳಗೊಂಡಿವೆ.
ಮೊದಲ ದಿನದಾಟದಂತ್ಯಕ್ಕೆ ಜಡೇಜಾ 163 ಎಸೆತಗಳಲ್ಲಿ ಅಜೇಯ 83 ರನ್ ಕಲೆಹಾಕಿದ್ದರು.
ಇಂದು 13 ರನ್‌ಗಳನ್ನು ದಾಖಲಿಸಿದ ಜಡ್ಡು, ಶತಕ ದಾಖಲಿಸಿದ ಸಾಧನೆ ಮಾಡಿದ್ದಾರೆ.
ಇನ್ನು ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 416 ರನ್ ಗಳಿಗೆ ಆಲೌಟ್ ಆಗಿದೆ.
ಟೀಂ ಇಂಡಿಯಾ ಪರ ಪಂತ್ 146 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.








