Rishi Sunak | ಬ್ರಿಟನ್ ಮುಂದಿನ ಪ್ರಧಾನಿ ಯಾರು..? ರೇಸ್ ನಲ್ಲಿ ರಿಷಿ ಸುನಕ್ !
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಲು ಸಿದ್ಧರಾಗುತ್ತಿದ್ದು, ಮುಂದಿನ ಪ್ರಧಾನಿ ಯಾರು ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ಆದ್ರೆ ಪ್ರಧಾನಿ ರೇಸ್ ನಲ್ಲಿ ಭಾರತದ ಮೂಲದ ರಿಷಿ ಸುನಕ್ ಕಾಣಿಸಿಕೊಂಡಿದ್ದಾರೆ. ಬೋರಿಸ್ ಜಾನ್ಸನ್ ಕ್ಯಾಬಿನೆಟ್ ನಲ್ಲಿ ರಿಷಿ ಸುನಕ್ ಆರ್ಥಿಕ ಖಾತೆ ಮಂತ್ರಿಯಾಗಿದ್ದರು. ಆದ್ರೆ ಬೋರಿಸ್ ಮೇಲೆ ಮುನಿಸಿಕೊಂಡ ರಿಷಿ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ತುಂಬಾ ಸಚಿವರು ರಾಜೀನಾಮೆ ನೀಡಿದ್ದಾರೆ. ಒಟ್ಟು 54 ಮಂದಿ ಸಚಿವರು ತಮ್ಮ ಪದವಿಗೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂದು ಬ್ರಿಟನ್ ಮಿಡಿಯಾ ವರದಿ ಮಾಡಿದೆ.
ಈ ಹಿಂದೆ ರಿಷಿ ಸಾಕಷ್ಟು ಭಾರಿ ಚರ್ಚೆಗೆ ಒಳಗಾಗಿದ್ದರು. ಅವರಿಗೆ ಸಂಬಂಧಿಸಿದ ಐದು ಅಂಶಗಳನ್ನು ನೋಡೋಣ
- ರಿಷಿ ಸುನಕ್ ವಯಸ್ಸು 42, 2020ರಲ್ಲಿ ಬೋರಿಸ್ ಪ್ರಧಾನಿ ಹುದ್ದೆಗೇರಿದಾಗ ರಿಷಿ ಆರ್ಥಿಕ ಮಂತ್ರಿಯಾಗಿದ್ದರು.
- ಕೊರೊನಾ ಕಾಟದ ಸಂದರ್ಭದಲ್ಲಿ ವ್ಯಾಪಾರಸ್ತರು, ಕಾರ್ಮಿಕರಗೋಸ್ಕರ ನೂರಾರು ಕೋಟಿ ಪೌಂಡ್ ಗಳ ಪ್ಯಾಕೆಜ್ ತಂದು ಎಲ್ಲರ ಗಮನ ಸೆಳೆದಿದ್ದರು.
- ಮಾಜಿ ರಕ್ಷಣಾ ಸಚಿವ ಪೆನ್ನಿ ಮೊರ್ಡಾಂಟ್ ಜೊತೆಗೆ ರಿಷಿ ಸುನಕ್ ಅವರು ಪ್ರಧಾನ ಮಂತ್ರಿ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
- ಆದ್ರೆ ರಿಷಿ ಅವರ ಮೇಲೆ ಕೆಲವು ಆರೋಪಗಳಿದ್ದು, ಅವು ಅವರಿಗೆ ಮೈನಸ್ ಆಗುವ ಸಾಧ್ಯತೆಗಳಿವೆ.
- ರಿಷಿ ಪತ್ನಿ ಟ್ಯಾಕ್ಸ್ ವಿವಾದ, ಅಮೆರಿಕಾ ಗ್ರೀನ್ ಕಾರ್ಡ್ ವಿವಾದಗಳಿವೆ.
- ಡೌನ್ ಸ್ಟ್ರಿಟ್ ನಲ್ಲಿ ನಡೆದ ಸಮಾವೇಶದಲ್ಲಿ ಭಾಗಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಕಾರಣ ದಂಡ ಕಟ್ಟಿದ್ದರು.
- ರಿಷಿ ಗ್ರಾಂಡ್ ಪೆರೆಂಟಸ್ ಪಂಜಾಬ್ ಮೂಲದವರಾಗಿದ್ದಾರೆ. ಇನ್ಫೋಸಿಸ್ ನಾರಾಯಣಮೂರ್ತಿ ಪುತ್ರಿ ಅಕ್ಷತ ಮೂರ್ತಿ ಅವರನ್ನ ರಿಷಿ ಮದುವೆಯಾಗಿದ್ದಾರೆ. ಇವರಿಗೆ ಇಬ್ಬರು ಕುಮಾರ್ತೆಯರು.
- ಒಂದು ವೇಳೆ ರಿಷಿ ಬ್ರಿಟನ್ ನೂತನ ಪ್ರಧಾನಿಯಾದರೇ ಚರಿತ್ರೆ ಸೃಷ್ಟಿಸಲಿದ್ದಾರೆ. ಬ್ರಿಟನ್ ಪ್ರಧಾನಿ ಜವಾಬ್ದಾರಿಗಳನ್ನು ವಹಿಸಿಕೊಂಡ ಮೊದಲ ಭಾರತ ಸಂತತಿ ವ್ಯಕ್ತಿಯಾಗಲಿದ್ದಾರೆ.
ಪ್ರಸ್ತುತ ಪ್ರಧಾನಿ ಬೋರಿಸ್ ಜಾನ್ಸನ್ ಇಂದೇ ರಾಜೀನಾಮೆ ನೀಡುತ್ತಾರೆ ಎಂದು ಬ್ರಿಟನ್ ಮಿಡಿಯಾ ತಿಳಿಸಿದೆ. ಮುಂದಿನ ಪ್ರಧಾನಿ ಆಯ್ಕೆಯಾಗುವವರೆಗೂ ಅವರೇ ಹಂಗಾಮಿ ಪ್ರಧಾನಿಯಾಗಿರಲಿದ್ದಾರೆ.