Koppala | ಕಾನೂನು ಬಾಹಿರ ಕೃತ್ಯ ಕೊಪ್ಪಳದ ವ್ಯಕ್ತಿ ಗಡಿಪಾರು
ಗಂಗಾವತಿ : ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದ್ದ ಕಾರಣ ವ್ಯಕ್ತಿಯೊಬ್ಬರನ್ನ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಅವರು ಕೊಪ್ಪಳದಿಂದ ಚಾಮರಾಜನಗರ ಜಿಲ್ಲೆಗೆ ಗಡಿಪಾರು ಮಾಡಿದ್ದಾರೆ.
ಪರಶುರಾಮ ಅಲಿಯಾಸ್ ರಮೇಶ ನಿಂಗಪ್ಪ ಸಿದ್ದಾಪುರ ಎಂಬ ವ್ಯಕ್ತಿಯನ್ನು ಗಡಿಪಾರಾದ ವ್ಯಕ್ತಿಯಾಗಿದ್ದಾರೆ.
ಈತ ಕಾರಟಗಿ ತಾಲೂಕಿನ ಹೊಸ ಜೂರಟಗಿ ಗ್ರಾಮದ ನಿವಾಸಿಯಾಗಿದ್ದಾನೆ.

ಪರಶುರಾಮ ಕಳೆದ 9 ವರ್ಷಗಳಿಂದ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದ್ದರಂತೆ.
ಈತನ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಈವರೆಗೆ 17 ಪ್ರಕರಣಗಳು ದಾಖಲಾಗಿವೆ.
14 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ.
ಈ ಹಿನ್ನೆಲೆಯಲ್ಲಿ ಗಡಿಪಾರು ಶಿಕ್ಷೆ ವಿಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.








