Virat Kohli : ವಿರಾಟ್ ಕ್ರೇಜ್ ತಗ್ಗೋದೇ ಇಲ್ಲ..
ಮೂರಂಕಿ ಸ್ಕೋರ್ ಸಾಧಿಸಿ ಸುಮಾರು ಸಾವಿರ ದಿನಗಳು ಕಳೆದಿವೆ. ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡು ಒಂದು ವರ್ಷ ಕಳೆದ್ರೂ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎಂಬೋದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಸರ್ವೆ ಸಾಕ್ಷಿಯಾಗಿದೆ. 2022 ಜೂನ್ ತಿಂಗಳಲ್ಲಿ ಕ್ರೀಡಾ ವಿಭಾಗದಲ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿರುವ ವ್ಯಕ್ತಿ ಯಾರು ಎಂಬ ವಿಷಯದ ಬಗ್ಗೆ ಅರ್ಮ್ಯಾಕ್ಸ್ ಅನ್ನೋ ಮಿಡಿಯೋ ಸಂಸ್ಥೆ ಒಂದು ಸರ್ವೆ ಮಾಡಿದೆ. ಇದರಲ್ಲಿ ವಿರಾಟ್ ಕೊಹ್ಲಿ ಮತ್ತೆ ಅಗ್ರಸ್ಥಾನದಲ್ಲಿ ನಿಂತಿದ್ದಾರೆ.
ಅರ್ಮ್ಯಾಕ್ಸ್ ಸಂಸ್ಥೆ ಸ್ಪೋರ್ಟ್ಸ್ ಸ್ಟಾರ್ಸ್ ಜೂನ್ 2022 ಹೆಸರಲ್ಲಿ ರಿಲೀಸ್ ಮಾಡಿದ ಟಾಪ್ 10 ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೇ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ, ಪೋರ್ಚುಗೀಸ್ ಸಾಕರ್ ಹೀರೋ ಕ್ರಿಸ್ಟಿಯಾನೊ ರೊನಾಲ್ಡೊ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ, ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ, ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು, ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಎರಡರಿಂದ ಹತ್ತನೇ ಸ್ಥಾನಗಳಲ್ಲಿದ್ದಾರೆ.

ಅಂದಹಾಗೆ ಈ ವರ್ಷದ ಆರಂಭದಲ್ಲಿ ಇದೇ ಸಂಸ್ಥೆ ಪ್ರಕಟಿಸಿದ ಪಟ್ಟಿಯಲ್ಲೂ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರು. ಫಾರ್ಮ್ ನಲ್ಲಿ ಇಲ್ಲದಿದ್ದರೂ, ಎಷ್ಟು ವಿಮರ್ಶೆಗಳನ್ನು ಎದುರಿಸಿದ್ರೂ ಜನಪ್ರಿಯತೆಯಲ್ಲಿ ವಿರಾಟ್ ಕೊಹ್ಲಿ ಎಂದೆಂದಿಗೂ ಕಿಂಗ್ ಅಂತ ನಿರೂಪಿಸಿಕೊಂಡಿದ್ದಾರೆ. ಆರು ವರ್ಷಗಳ ಹಿಂದೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ರೋಹಿತ್ ಶರ್ಮಾ, ಇತ್ತೀಚೆಗೆ ರಿಲೀಸ್ ಆದ ಪಟ್ಟಿಯಲ್ಲಿ ಒಂದು ಸ್ಥಾನ ಕಳೆದುಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ.








