Karan Johar : ಬಾಲಿವುಡ್ ಕತೆ ಮುಗೀತು ಎಂದವರ ಮೇಲೆ ಕರಣ್ ಫೈರ್
ಪುಷ್ಪ, ಆರ್ ಆರ್ ಆರ್, ಕೆಜಿಎಫ್ 2 ಸಿನಿಮಾಗಳು ಬಾಲಿವುಡ್ ಮೇಲೆ ದಂಡಯಾತ್ರೆ ಮಾಡಿದ್ದು ಗೊತ್ತೇ ಇದೆ. ಅಲ್ಲಿನ ಬಾಕ್ಸ್ ಆಫೀಸ್ ಗೆ ಕನ್ನಾ ಹಾಕಿದ್ದ ಈ ಸಿನಿಮಾಗಳು ಭಾರಿ ಕಲೆಕ್ಷನ್ ಸಾಧಿಸಿವೆ.
ಆದ್ರೆ ಹಿಂದಿಯ ಸಿನಿಮಾಗಳು ಮಾತ್ರ ಒಂದೆರಡು ಬಿಟ್ಟರೇ ಇನ್ನುಳಿದ ಸಿನಿಮಾಗಳು ಉಲ್ಟಾ ಹೊಡೆದಿವೆ. ದೊಡ್ಡ ಹೀರೋಗಳ ಸಿನಿಮಾಗಳಿಗೂ ಒಳ್ಳೆ ರೆಸ್ಪಾನ್ಸ್ ಸಿಗುತ್ತಿಲ್ಲ.
ಹೀಗಾಗಿ ಬಾಲಿವುಡ್ ಕಥೆ ಮುಗೀತು ಅಂತಾ ಎಲ್ಲರೂ ಹೇಳುತ್ತಿದ್ದಾರೆ. ಇದೀಗ ಈ ವಿಚಾರವಾಗಿ ನಿರ್ಮಾಪಕ ಕರಣ್ ಜೋಹಾರ್ ಸ್ಪಂದಿಸಿದ್ದಾರೆ.
ಹುರುಳಿಲ್ಲದ ಮಾತುಗಳು.. ಒಳ್ಳೆ ಸಿನಿಮಾಗಳು ಯಾವಾಗಲೂ ಗೆಲುವು ಸಾಧಿಸುತ್ತವೆ. ಗಂಗೂಭಾಯ್, ಭೋಲ್ ಭುಲಾಯಾ 2 ಸಿನಿಮಾಗಳು ಭಾರಿ ಯಶಸ್ಸು ಕಂಡಿದ್ದು ಗೊತ್ತೇ ಇದೆ.
ಹಾಗೇ ಜುಗ್ ಜುಗ್ ಜಿಯಾ ಮ್ಯೂವಿ ಕೂಡ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ. ಸರಿಯಾದ ಕಂಟೈಂಟ್ ಇಲ್ಲದೇ ಸಿನಿಮಾಗಳು ಮಾತ್ರ ಸೋಲು ಕಾಣುತ್ತಿವೆ.

ಆದರೂ ನಮ್ಮ ಬಳಿ ತುಂಬಾ ಒಳ್ಳೆಯ ಸಿನಿಮಾಗಳಿವೆ. ಲಾಲ್ ಸಿಂಗ್ ಚಡ್ಡಾ, ರಕ್ಷಾ ಬಂಧನ್, ಬ್ರಹ್ಮಾಸ್ತ್ರ, ರೋಹಿತ್ ಶೆಟ್ಟಿ ಸಿನಿಮಾ, ಈ ವರ್ಷದ ಕೊನೆಯಲ್ಲಿ ಸಲ್ಮಾನ್ ಖಾನ್ ಸಿನಿಮಾ ಬರಲಿದೆ.
ಈ ಸಿನಿಮಾಗಳಿಗಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಥಿಯೇಟರ್ ಗಳಿಗೆ ಜನರನ್ನು ಕರೆದುಕೊಂಡು ಬರುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಸಿನಿಮಾ ಟ್ರೈಲರ್, ಕ್ಯಾಂಪೇನ್ ಎಲ್ಲವೂ ಫರ್ಪೆಕ್ಟ್ ಆಗಿರಬೇಕು ಎಂದು ಹೇಳಿದರು.
ಕರಣ್ ಜೋಹಾರ್ ಬ್ಯಾನರ್ ನಲ್ಲಿ ಬಂದ ಜುಗ್ ಜುಗ್ ಜಿಯಾ ಸಿನಿಮಾ ಕಳೆದ ತಿಂಗಳು ರಿಲೀಸ್ ಆಗಿ 84 ಕೋಟಿಗಳನ್ನ ಬಾಚಿಕೊಳ್ತು.
ಗಂಗೂಬಾಯ್ ಸಿನಿಮಾ 180 ಕೋಟಿ, ಭೂಲ್ ಭುಲಯಾ 2 ಸಿನಿಮಾ 250 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ.
ಇದೇ ಸಮಯದಲ್ಲಿ ರಿಲೀಸ್ ಆದ ಸಲ್ಮಾನ್ ಖಾನ್ ಅವರ ಅಂತಿಮ್, ಅಜಯ್ ದೇವಗನ್ ನಟನೆಯ ರನ್ ವೇ 34, ಅಕ್ಷರ್ ಕುಮಾರ್ ಅವರ ಸಾಮ್ರಾಟ್ ಪೃಥ್ವಿರಾಜ್, ರಣ್ ಬೀರ್ ಕಪೂರ್ ನಟನೆಯ ಷಂಶೇರಾ ಸಿನಿಮಾಗಳು ಫ್ಲಾಫ್ ಆಗಿವೆ.








