Bangalore- chamarajapet Police Route March | ಖಾಕಿ ಕಣ್ಗಾವಲಿನಲ್ಲಿ ಚಾಮರಾಜಪೇಟೆ | ಪೊಲೀಸರ ರೂಟ್ ಮಾರ್ಚ್
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಹಿನ್ನಲೆ ಇಡೀ ಚಾಮರಾಜಪೇಟೆ ಖಾಕಿ ಕಣ್ಗಾವಲಿನಲ್ಲಿದೆ. ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲೆಡೆ ಕಟ್ಟೆಚ್ಚರವಹಿಸಲಾಗಿದೆ.
ಇಂದು ಚಾಮರಾಜಪೇಟೆ ವ್ಯಾಪ್ತಿಯ ಪ್ರಮುಖ ಏರಿಯಾಗಳಲ್ಲಿ 3 km ರೂಟ್ ಮಾರ್ಚ್ ನಡೆಯಲಿದೆ.
ಸಿವಿಲ್ ಪೊಲೀಸರು ಹಾಗೂ ಸ್ವಾಟ್ ಪಡೆಯಿಂದ ಇಂದು ಪೆರೇಡ್ ನಡೆಯುತ್ತಿದೆ.
ಈ ರೂಟ್ ಮಾರ್ಚ್ ನಲ್ಲಿ ಸುಮಾರು 500 ಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದಾರೆ.
ಅಂದಹಾಗೆ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರದ ಅರೆಸೇನಾ ಪಡೆ ಕರೆಸಲು ಪೊಲೀಸರು ಮುಂದಾಗಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಆಗಸ್ಟ್ 13 ರಂದು ಚಾಮರಾಜಪೇಟೆಗೆ ಅರೆಸೇನಾ ಪಡೆ ಬಂದಿಳಿಯಲಿದೆ.
ಜೊತೆಗೆ ರ್ಯಾಪಿಡ್ ಆಕ್ಷ್ಯನ್ ಪೋರ್ಸ್ ಕೂಡ ಕರೆಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
ಒಟ್ಟಾರೆ ಸ್ವಾತಂತ್ರ್ಯ ದಿನಾಚರಣೆಯಂದು ಇಡೀ ಈದ್ಗಾ ಮೈದಾನ ಹಾಗೂ ಚಾಮರಾಜಪೇಟೆ ಸುತ್ತ ಪೊಲೀಸರ ಹದ್ದಿನ ಕಣ್ಣು ಇರಲಿದೆ.
ಅತಿ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಿ ಬಂದೋಬಸ್ತ್ ಮಾಡಲು ಪೊಲೀಸರು ನಿರ್ಧಾರ ಮಾಡಿದ್ದಾರೆ.