Rakesh Jhunjhunwala | ಮನಿ ಮ್ಯಾಗ್ನೆಟ್ ರಾಕೇಶ್ ಜುಂಜುನ್ ವಾಲಾ ಇನ್ನಿಲ್ಲ
ಭಾರತದ ವಾರನ್ ಬಫೆಟ್ ಎಂದೇ ಖ್ಯಾತಿ ಪಡೆದಿದ್ದ ರಾಕೇಶ್
ಬಹು ಅಂಗಾಂಗ ವೈಫಲ್ಯದಿಂದ ರಾಕೇಶ್ ಕೊನೆಯುಸಿರು
ಮುಂಬೈನ ಬ್ರೀಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಸಾವು
ಷೇರು ಮಾರುಕಟ್ಟೆಯ ಬಿಗ್ ಬುಲ್ ರಾಕೇಶ್ ವಿಧಿವಶ
ಮುಂಬೈ : ಷೇರು ಮಾರುಕಟ್ಟೆಯ ಬಿಗ್ ಬುಲ್ ಎಂದೇ ಖ್ಯಾತಿ ಪಡೆದಿದ್ದ ರಾಕೇಶ್ ಜುಂಜುನವಾಲಾ ಅವರು ವಿಧಿವಶರಾಗಿದ್ದಾರೆ.
ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರಾಕೇಶ್ ಜುಂಜುನವಾಲಾ ಅವರನ್ನು ಮುಂಬೈನ ಬ್ರೀಜ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಆದ್ರೆ ಇಂದು ಬೆಳಿಗ್ಗೆ 6.30 ಕ್ಕೆ ರಾಕೇಶ್ ಅವರು ಇಹಲೋಕ ತ್ಯಜಿಸಿದ್ದಾರೆ.
ಜುಲೈ 5, 1960ರಲ್ಲಿ ಜನಸಿದ್ದ ರಾಕೇಶ್ ಅವರು, ಐದು ಸಾವಿರ ರೂಪಾಯಿಗಳಿಂದ ಷೇರು ವಹಿವಾಟು ಆರಂಭಿಸಿ, ಬರೋಬ್ಬರಿ 5.8 ಶತಕೋಟಿ ಡಾಲರ್ ಅಂದೇ ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿ ನಿವ್ವಳ ಆಸ್ತಿಯನ್ನು ಹೊಂದಿದ್ದರು.
ಹೀಗಾಗಿ ಇವರನ್ನ ಷೇರು ಮಾರುಕಟ್ಟೆಯ ಬಿಗ್ ಬುಲ್ ಅಂತಾನೇ ಕರೆಯುತ್ತಿದ್ದರು.
ಅಂದಹಾಗೆ ರಾಕೇಶ್ ಅವರು ಮಾಜಿ ಜೆಟ್ ಏರ್ ವೇಸ್ ಸಿಇಓ ದುಬೆ ಮತ್ತು ಇಂಡಿಗೋ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್ ಅವರೊಂದಿಗೆ ಸೇರಿ ಇತ್ತೀಚೆಗಷ್ಟೆ ಆಕಾಶ್ ಏರ್ ಲೈನ್ಸ್ ಆರಂಭಿಸಿದ್ದರು.
ಮುಂಬೈನಲ್ಲಿ ರಾಜಸ್ಥಾನಿ ಕುಟುಂಬದಲ್ಲಿ ಜನಿಸಿದ್ದ ರಾಕೇಶ್ ಅವರ ತಂದೆ ಆದಾಯ ತೆರಿಗೆ ಆಯುಕ್ತರಾಗಿದ್ದರು.