Mangaluru | ಚಾಟಿಂಗ್‌ನಿಂದ ವಿಮಾನ ಹಾರಾಟ ವಿಳಂಬ!
ಹುಡುಗ – ಹುಡುಗಿ ಚಾಟಿಂಗ್ ವಿಳಂಬ
ಯೂ ಆರ್ ಬಾಂಬರ್ ಎಂದಿದ್ದಕ್ಕೆ ಫಜೀತಿ
6 ಗಂಟೆಗಳ ಕಾಲ ವಿಮಾನ ಹಾರಾಟ ವಿಳಂಬ
ಮಂಗಳೂರಿನಿಂದ ಮುಂಬೈಗೆ ಹೊರಡಬೇಕಿದ್ದ ಫ್ಲೈಟ್
ಮಂಗಳೂರು : ಯುವಕ – ಯುವತಿ ಇಬ್ಬರು ನಡೆಸಿದ ಚಾಟಿಂಗ್ ನಿಂದಾಗಿ ಮಂಗಳೂರು ವಿಮಾನ ನಿಲ್ಡಾಣದಲ್ಲಿ ವಿಮಾನ ಹಾರಾಟವೇ ವಿಳಂಬವಾಗಿದೆ.
ಮಂಗಳೂರಿನಿಂದ ಮುಂಬೈ ತೆರಳುತ್ತಿದ್ದ ತನ್ನ ಗೆಳೆಯನಿಗೆ ಯುವತಿಯೊಬ್ಬಳು ಯು ಆರ್ ಎ ಬಾಂಬರ್ ಎಂದು ಮೆಸೇಜ್ ಮಾಡಿದ್ದಳು. ಇದರಿಂದ ವಿಮಾನ ನಿಲ್ದಾಣದಲ್ಲಿ ಭಾರಿ ಆತಂಕ ಸೃಷ್ಟಿಯಾಗಿತ್ತು.
ಉತ್ತರ ಪ್ರದೇಶದ ಗಾಜಿಯಾಬಾದ್ ನ ಇಂದಿರಪುರಂ ತಾಲೂಕಿನ ಸಿಮ್ರಾನ್ ಟಾಮ್ ಮತ್ತು ಗಾಜಿಯಾಬಾದ್ ನ ದಿಪಯಾನ್ ಮಂಜಿ ಎಂಬಿಬ್ಬರು ವಾಟ್ಸ್ ಆಪ್ ಚಾಟಿಂಗ್ ಇದಾಗಿದೆ.

ಯು ಆರ್ ಎ ಬಾಂಬರ್ ಎಂಬ ಸಂದೇಶವನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಹಿಳಾ ಪ್ರಯಾಣಿಕರು ಹೇಳಿದ್ದಾರೆ.
ಕೂಡಲೇ ಸಿಐಎಸ್ ಎಫ್, ಇಂಡಿಗೋ ಸೆಕ್ಯೂರಿಟಿ ಮತ್ತು ತಾಂತ್ರಿಕ ಸಿಬ್ಬಂದಿ ಪ್ರಯಾಣಿಕರನ್ನು ಮತ್ತು ಲಗೇಜ್ ಗಳನ್ನು ತಪಾಸಣೆ ನಡೆಸಿದ್ದಾರೆ.
ಇದರಿಂದಾಗಿ ಮಂಗಳೂರಿನಿಂದ ಮುಂಬೈಗೆ ಹೊರಡಬೇಕಿದ್ದ ವಿಮಾನವು ಆರು ಗಂಟೆಗಳ ಕಾಲ ವಿಳಂಬವಾಗಿದೆ.








