Shimoga | ಬಜರಂಗದಳ ಕಾರ್ಯಕರ್ತ ಮೇಲೆ ಹಲ್ಲೆ
ಶಿವಮೊಗ್ಗ : ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ನಡುವೆಯೂ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ನೆಹರೂ ನಗರದಲ್ಲಿ ಡಿಚ್ಚಿ ಮುಬಾರತ್ ಎಂಬಾತನಿಗೂ ಸುನೀಲ್’ಗೂ ಗಲಾಟೆ ನಡೆದಿದ್ದು, ಈ ವೇಳೆ ಸುನೀಲ್ ಮೇಲೆ ಹಲ್ಲೆ ನಡೆಸಲಾಗಿದೆ.

ಚಾಕುವಿನಿಂದ ಇರಿಯಲು ಯತ್ನಿಸಲಾಗಿದೆ. ಆದರೆ, ಸುನೀಲ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಇಬ್ಬರ ನಡುವಿನ ಹಳೆಯ ವೈಮನಸ್ಯಕ್ಕೆ ನಡೆದಿದ್ದು ಎಂದು ಹೇಳಲಾಗಿದ್ದರೂ, ಸೂಕ್ಷ್ಮ ಸಮಯದ ವೇಳೆ ಇಂತಹ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








