Shahid Afridi | ಇಂಡೋ – ಪಾಕ್ ಕಾಳಗದಲ್ಲಿ ಗೆಲುವು ಯಾರಿಗೆ – ಅಫ್ರಿದಿ ಹೇಳಿದ್ದೇನು ?
ದುಬೈ ನ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ಭಾರತ – ಪಾಕಿಸ್ತಾನ್ ಕ್ರಿಕೆಟ್ ತಂಡಗಳ ನಡುವೆ ಪಂದ್ಯ ನಡೆಯಲಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆದ ಟಿ 20 ವಿಶ್ವಕಪ್ ನಲ್ಲಿ ಇದೇ ಮೈದಾನದಲ್ಲಿ ಪಾಕಿಸ್ತಾನ ತಂಡವು ಟೀಂ ಇಂಡಿಯಾ ಮೇಲೆ 10 ವಿಕೆಟ್ ಗಳ ಅಂತರದ ಗೆಲುವು ಸಾಧಿಸಿತ್ತು.
ಮತ್ತೊಮ್ಮೆ ಅದೇ ವೇದಿಕೆಯಲ್ಲಿ ಈ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದ, ಸಾಕಷ್ಟು ಕುತೂಹಲ ಮೂಡಿಸಿವೆ. ಟಿ 20 ವಿಶ್ವಕಪ್ ನಲ್ಲಿ ಸೋತಿರುವ ಟೀಂ ಇಂಡಿಯಾ ಏಷ್ಯಾಕಪ್ ನಲ್ಲಿ ಸೇಡು ತೀರಿಸಿಕೊಳ್ಳಲು ತಯಾರಿ ನಡೆಸಿದ್ರೆ, ಪಾಕಿಸ್ತಾನ ತಂಡವೂ ಮತ್ತೊಮ್ಮೆ ಅದೇ ಫಲಿತಾಂಶವನ್ನು ಪುನರಾವರ್ತಿಸಲು ಪ್ಲಾನ್ ಮಾಡಿಕೊಂಡಿವೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ ಅವರನ್ನ ಈ ಎರಡು ತಂಡಗಳಲ್ಲಿ ಯಾರು ಗೆಲ್ಲುತ್ತಾರೆ ಎಂದು ಪ್ರಶ್ನಿಸಲಾಗಿದ್ದು, ಯಾರೂ ಊಹಿಸದೇ ಉತ್ತರವನ್ನು ನೀಡಿದ್ದಾರೆ. ಸಾಮಾನ್ಯವಾಗಿ ಟೀಂ ಇಂಡಿಯಾದ ಅಭಿಮಾನಿ ಅಥವಾ ಮಾಜಿ ಕ್ರಿಕೆಟರ್ ಆಗಿದ್ದರೇ ಭಾರತದ್ದೇ ಗೆಲುವು ಅಂತಾ ಹೇಳುತ್ತಿದ್ದರು, ಒಂದು ವೇಳೆ ಪಾಕಿಸ್ತಾನದ ಕ್ರಿಕೆಟರ್ ಅಥವಾ ಅಭಿಮಾನಿಯಾಗಿದ್ರೇ ಪಾಕಿಸ್ಥಾನದ್ದೇ ಗೆಲುವು ಎನ್ನುತ್ತಿದ್ದರು. ಆದ್ರೆ ಅಫ್ರಿದಿ ಇದಕ್ಕೆ ಭಿನ್ನವಾಗಿ ಉತ್ತರ ನೀಡಿದ್ದಾರೆ. ಟ್ವಿಟ್ಟರ್ ವೇದಿಕೆಯಾಗಿ ಶಾಹಿದ್ ಅಫ್ರಿದಿ ಅವರನ್ನ ಕೆಲವು ಅಭಿಮಾನಿಗಳು, ಪಾಕಿಸ್ತಾನ್, ಟೀಂ ಇಂಡಿಯಾದಲ್ಲಿ ಯಾವ ತಂಡ ಬಲಿಷ್ಠವಾಗಿದೆ..? ಯಾವ ತಂಡ ಪಂದ್ಯ ಗೆಲ್ಲಲಿದೆ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಯಾರು ಕಡಿಮೆ ತಪ್ಪುಗಳನ್ನು ಮಾಡುತ್ತಾರೋ ಅವರೇ ಪಂದ್ಯ ಗೆಲ್ಲುತ್ತಾರೆ ಎಂದು ಅಫ್ರಿದಿ ಉತ್ತರಿಸಿದ್ದಾರೆ. ಅಪ್ರಿದಿಯಿಂದ ಈ ಉತ್ತರ ಬರುತ್ತದೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿರಲಿಲ್ಲ. ಯಾಕೆಂದರೇ ಅಫ್ರಿದಿ ಯಾವಾಗಲೂ ಟೀಂ ಇಂಡಿಯಾದ ಬಗ್ಗೆ ವಿಮರ್ಶೆ ಮಾಡುತ್ತಲೇ ಇರುತ್ತಾರೆ.
ಅಂದಹಾಗೆ ಇನ್ನು ಏಷ್ಯಾಕಪ್ ಗೆ ಆಯ್ಕೆಯಾಗಿ ರೋಹಿತ್ ಶರ್ಮಾ ಬಳಗದಲ್ಲಿ ಮೂವರು ಬಿಟ್ಟು ಇನ್ನುಳಿದ ಎಲ್ಲಾ ಸದಸ್ಯರು ಮಂಗಳವಾರ ದುಬೈ ಸೇರಿಕೊಂಡಿದ್ದಾರೆ. ಜಿಂಬಾಬ್ವೆಯಲ್ಲಿರುವ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್, ದೀಪಕ್ ಹೂಡಾ, ರಿಜರ್ವ್ ಪ್ಲೇಯರ್ ಅಕ್ಷರ್ ಪಟೇಲ್ ಇನ್ನೂ ಟೀಂ ಇಂಡಿಯಾ ಸೇರಿಕೊಂಡಿಲ್ಲ. ಏಷ್ಯಾಕಪ್ ಟೂರ್ನಿ ಇದೇ 27 ರಿಂದ ಶುರುವಾಗಲಿದೆ. 28 ರಂದ ಇಡೀ ಕ್ರಿಕೆಟ್ ಲೋಕವೇ ಕಾಯುತ್ತಿರುವ ಇಂಡೋ – ಪಾಕ್ ಕದನ ನಡೆಯಲಿದೆ. ಇದು ವಿರಾಟ್ ಕೊಹ್ಲಿಯ 100ನೇ ಟಿ 20 ಪಂದ್ಯವಾಗಿದೆ.