BJP MLA Raja Singh | ಮೊಹ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ
ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಬಂಧನ
ಕೇವಲ 45 ನಿಮಿಷಗಳಲ್ಲಿ ಜಾಮೀನು ಮಂಜೂರು
ಯಾವುದೇ ಷರತ್ತು ಇಲ್ಲದೇ ಜಾಮೀನು ಮಂಜೂರು
ಹೈದರಾಬಾದ್ : ಪ್ರವಾದಿ ಮೊಹ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದರು.
ಆದರೇ ಕೇವಲ 45 ನಿಮಿಷಗಳಲ್ಲಿ ಅವರು ಜಾಮೀನು ಪಡೆದುಕೊಂಡು ಹೊರ ಬಂದಿದ್ದಾರೆ.
ಅವರ ನಿವಾಸದಲ್ಲಿ ರಾಜಾಸಿಂಗ್ ಅವರನ್ನ ಬಂಧಿಸಿದ್ದ ಪೊಲೀಸರು ನಾಂಪಲ್ಲಿ ನ್ಯಾಯಾಲಕ್ಕೆ ಕರೆದುಕೊಂಡು ಹೋಗಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಯಾವುದೇ ಷರತ್ತುಗಳಿಲ್ಲದೇ ಜಾಮೀನು ಮಂಜೂರು ಮಾಡಿ ತಕ್ಷಣ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.
ಕೋರ್ಟ್ ನಲ್ಲಿ ರಾಜಾ ಸಿಂಗ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಪೊಲೀಸರು ಅರ್ಜಿ ಸಲ್ಲಿಕೆ ಮಾಡಿದ್ದರು. ಇದನ್ನ ಕೋರ್ಟ್ ತಿಸ್ಕರಿಸಿ, ಜಾಮೀನು ಮಂಜೂರು ಮಾಡಿದೆ.
ಅಂದಹಾಗೆ ಶಾಸಕರನ್ನು ಬಂಧನ ಮಾಡುತ್ತಿದ್ದಂತೆ ಕೋರ್ಟ್ ಮುಂದೆ ಅವರ ಬೆಂಬಲಿಗರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರು. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ತೆಲಂಗಾಣದ ಗೋಶಾಮಹಲ್ ನ ಶಾಸಕ ರಾಜಾ ಸಿಂಗ್ ಕೆಲವು ದಿನಗಳ ಹಿಂದೆ ಒಂದು ವಿಡಿಯೋವನ್ನು ರಿಲೀಸ್ ಮಾಡಿದ್ದರು.
ಇದರಲ್ಲಿ ಪ್ರವಾದಿ ಮೊಹ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.