Bidar | ಗಾಂಜಾ ಬೆಳೆದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು
ಬೀದರ್ : ಮಹಾರಾಷ್ಟ್ರ ಮತ್ತು ತೆಲಂಗಾಣ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಭಾಗ ಬೀದರ್ ಜಿಲ್ಲೆ ಔರಾದ ಪಟ್ಟಣದಲ್ಲಿ ಭಯವಿಲ್ಲದೆ ತನ್ನ ಹೊಲದಲ್ಲಿ ಗಾಂಜಾ ಬೆಳೆಯುತ್ತಿದ್ದ ರೈತರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಗಡಿ ಪ್ರದೇಶದಲ್ಲಿ ವಾಸಿಸುವ ಔರಾದ ತಾಲೂಕಿನ ಹಲವು ಗ್ರಾಮ ಗುಡ್ಡಗಾಡು ಪ್ರದೇಶ ಹೊಂದಿರುವ ಪ್ರದೇಶದಲ್ಲಿ ಹಲವರು ಗಾಂಜಾ ಬೆಳೆಯಲು ಮುಂದಾಗಿದ್ದಾರೆ.
ಹೊಲದಲ್ಲಿ ಹತ್ತಿ ಬೆಳೆದು ಹೊಲದ ಮದ್ಯೆ ಗಾಂಜಾ ಹಾಕಿ ಬೆಳಸುತ್ತಿದ್ದಾರೆ.

ಈ ಸಂಬಂಧ ಖಚಿತ ಮಾಹಿತಿ ಪಡೆದ ಪೊಲೀಸರು, ಗಾಂಜಾ ಗಿಡ ಬೆಳೆದಿದ್ದ ಆರೋಪಿ ಪುಂಡಲೀಕ ತುಳಸಿರಾಮನನ್ನು ಬಂಧಿಸಿದ್ದಾರೆ..
ಪುಂಡಲೀಕ ತುಳಸಿರಾಮ ಹೊಲದಲ್ಲಿ ಮಿಶ್ರಿತ ಬೆಳೆಯಾಗಿ 70 ಗಿಡ . 15 ಕೆ.ಜಿ ಗಾಂಜಾ ಸುಮಾರು ₹1.17ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. Bidar A farmer who grew cannabis police








