ಬಿಗ್ ಬಾಸ್ ಮನೆಯಿಂದ ಮತ್ತೋರ್ವ ಔಟ್!
ಎಲಿಮಿನೇಷನ್ ನಲ್ಲಿ ಉದಯ್ ಸೂರ್ಯ ಔಟ್
ಬಿಗ್ ಬಾಸ್ ನಲ್ಲಿ ಎರಡನೇ ಎಲಿಮಿನೇಷನ್
ಎಲಿಮಿನೇಷನ್ ಗೆ ಏಳು ಮಂದಿ ನಾಮಿನೇಟ್
7 ಮಂದಿ ನಾಮಿನೇಟ್ ನಲ್ಲಿ ಸೂರ್ಯ ಔಟ್
ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ ಒಂದರ ಎರಡನೇ ಎಲಿಮಿನೇಷನ್ ನಡೆದಿದೆ.
ಮೂರನೇ ವಾರದ ಎಲಿಮಿನೇಷನ್ ನಲ್ಲಿ ಉದಯ್ ಸೂರ್ಯ ಹೊರ ಬಂದಿದ್ದಾರೆ.
ಈ ಬಾರಿ ಏಳು ಮಂದಿ ಸ್ಪರ್ಧಿಗಳು ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು.
ಈ ಪೈಕಿ ಉದಯ್ ಸೂರ್ಯ ಅತಿ ಕಡಿಮೆ ವೋಟ್ ಗಳನ್ನು ಪಡೆದುಕೊಂಡಿದ್ದಾರೆ.
ಹೀಗಾಗಿ ಅವರು ಇದೀಗ ದೊಡ್ಮನೆಯಿಂದ ಹೊರ ಬಂದಿದ್ದಾರೆ.

ಈ ವಾರ ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ, ಸೋಮಣ್ಣ ಮೇಲೆ ನಾಮಿನೇಷನ್ ತೂಗುಗತ್ತಿ ಇತ್ತು.
ಈ ಪೈಕಿ ಮೊದಲಿಗರಾಗಿ ಆರ್ಯವರ್ಧನ್ ಸೇವ್ ಆದ್ರೆ, ಆ ಬಳಿಕ ರೂಪೇಶ್ ಶೆಟ್ಟಿ, ಸೋಮಣ್ಣ, ಅಕ್ಷತಾ, ಚೈತ್ರಾ, ಜಯ ಶ್ರೀ ಉಳಿದುಕೊಂಡರು. ಉದಯ್ ಸೂರ್ಯ ಎಲಿಮಿನೇಟ್ ಆದರು.
ಈ ಓಟಿಟಿ ಬಿಗ್ ಬಾಸ್ ಸೀಸನ್ ಒಂದು ಆರು ವಾರಗಳ ಕಾಲ ನಡೆಯಲಿದ್ದು, ಎರಡನೇ ಎಲಿಮಿನೇಷನ್ ನೊಂದಿಗೆ ಆಟ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. Uday Surya eliminated from Bigg Boss OTT








