Virat Kohli | ಕೊಹ್ಲಿಗೆ ಹಾಂಗ್ಕಾಂಗ್ ತಂಡದ ಗಿಫ್ಟ್
ಕೊಹ್ಲಿಗೆ ಟೀಂ ಜರ್ಸಿ ನೀಡಿದ ಹಾಂಗ್ ಕಾಂಗ್
ವಿರಾಟ್ ನೀವು ಇಂದಿನ ಪೀಳಿಗೆಗೆ ಸ್ಪೂರ್ತಿ
ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದ ಟೀಂ
ಹಾಂಗ್ ಕಾಂಗ್ ಕ್ರಿಕೆಟ್ ಗೆ ವಿರಾಟ್ ಧನ್ಯವಾದ
ಏಷ್ಯಾಕಪ್ ಭಾಗವಾಗಿ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ಆ ಮೂಲಕ ಸೂಪರ್ ನಾಲ್ಕರ ಘಟ್ಟಕ್ಕೆ ಟೀಂ ಇಂಡಿಯಾ ಸೂಪರ್ ಎಂಟ್ರಿ ಕೊಟ್ಟಿದೆ.
ಈ ಪಂದ್ಯದಲ್ಲಿ ಕಿಂಗ್ ವಿರಾಟ್ ಕೊಹ್ಲಿ ಅರ್ಧಶತಕದ ಮೂಲಕ ಮಿಂಚಿದರು.
ಈ ಪಂದ್ಯದಲ್ಲಿ 44 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 59 ರನ್ ಗಳನ್ನು ಗಳಿಸಿ ಅಜೇಯರಾಗಿ ಉಳಿದರು.
ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿರುವುದರಿಂದ ಚಿಕೂ ಅಭಿಮಾನಿಗಳು ಸದ್ಯ ಖುಷಿಯಲ್ಲಿದ್ದಾರೆ.
ಈ ನಡುವೆ ಕೊಹ್ಲಿ ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿರುವ ಫೋಟೋವೊಂದು ಸದ್ಯ ಸೋಶಿಯಲ್ ಮೀಯಾದಲ್ಲಿ ವೈರಲ್ ಆಗುತ್ತಿದೆ.

ಪಂದ್ಯದ ಬಳಿಕ ಹಾಂಗ್ ಕಾಂಗ್ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿಗೆ ವಿಶೇಷ ಗಿಫ್ಟ್ ನೀಡಿದೆ.
ತಂಡದ ಜರ್ಸಿ ಮೇಲೆ ಎಲ್ಲಾ ಆಟಗಾರರು ಸಹಿ ಮಾಡಿದ್ದು, ಅದನ್ನು ಉಡುಗೊರೆಯಾಗಿ ನೀಡಿದ್ದಾರೆ.
ವಿರಾಟ್ ನೀವು ಇಂದಿನ ಪೀಳಿಗೆಗೆ ಸ್ಫೂರ್ತಿ ನೀಡಿದ್ದಕ್ಕೆ ಧನ್ಯವಾದಗಳು. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ.
ಮುಂದೆ ಅನೇಕ ಅಚ್ಚರಿಯ ದಿನಗಳು ನಿಮಗಾಗಿ ಕಾದಿವೆ.
ಪ್ರೀತಿಯಿಂದ ಹಾಂಗ್ ಕಾಂಗ್ ತಂಡ ಎಂದು ಜರ್ಸಿ ಮೇಲೆ ಬರೆಯಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ಧನ್ಯವಾದ ಹಾಂಗ್ ಕಾಂಗ್ ಕ್ರಿಕೆಟ್, ಸೋ ಸ್ವೀಟ್ ಎಂದು ಬರೆದುಕೊಂಡಿದ್ದಾರೆ.








