ಭಾರತ ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶ
ವಾಷಿಂಗ್ ಟನ್ : ಬ್ರಿಟನ್ ಅನ್ನು ಹಿಂದಿಕ್ಕಿ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ.
ಪ್ರಸ್ತುತ ವಿಶ್ವ ದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪೈಕಿ ಅಮೆರಿಕಾ, ಚೀನಾ, ಜಪಾನ್, ಜರ್ಮನಿ ನಂತರದ ಸ್ಥಾನದಲ್ಲಿ ಭಾರತ ಇದೆ.
ವಿಶ್ವದ ಆರ್ಥಿಕತೆಯಲ್ಲಿ ಭಾರತಕ್ಕಿಂತಲೂ ಬ್ರಿಟನ್ ಹಿಂದೆ ಇದ್ದು, ಆರನೇ ಸ್ಥಾನಕ್ಕೆ ಕುಸಿದಿದೆ.
ಬ್ರಿಟನ್ ಸದ್ಯ ಅತಿ ಹೆಚ್ಚಿನ ಜೀವನ ವೆಚ್ಚ ಎದುರಿಸುತ್ತಿದೆ. ಜೊತೆಗೆ ಹಣದುಬ್ಬರ ಸಮಸ್ಯೆ ಕೂಡ ಕಾಡುತ್ತಿದೆ.

ಹೀಗಾಗಿ ಬ್ರಿಟನ್ ಗೆ ವಿಶ್ವದ ಆರ್ಥಿಕತೆಯಲ್ಲಿ ದೊಡ್ಡ ಹೊಡೆತ ಬಿದ್ದಿದೆ.
2021ರ ಕೊನೆಯ ತ್ರೈಮಾಸಿಕ ವರದಿಯಲ್ಲಿ ಭಾರತ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಜಿಡಿಪಿ ಅಂಕಿ ಅಂಶಗಳ ಪ್ರಕಾರ 2022ರಲ್ಲೂ ಭಾರತ ಮೊದಲ ತ್ರೈಮಾಸಿಕದಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎಂದು ವರದಿಯಾಗಿದೆ.
ಅಲ್ಲದೇ ಡಾಲರ್ ಮೌಲ್ಯದ ದರದಲ್ಲಿ ಲೆಕ್ಕ ಹಾಕಿದಾಗ ಭಾರತೀಯ ಆರ್ಥಿಕತೆಯ ಗಾತ್ರ 854.7 ಬಿಲಿಯನ್ ಡಾಲರ್ ಆಗಿದ್ದು, ಬ್ರಿಟನ್ ಆರ್ಥಿಕತೆ 816 ಬಿಲಿಯನ್ ಡಾಲರ್ ಆಗಿದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.








