“ಗುರು ಶಿಷ್ಯರು” ಟ್ರೈಲರ್ ಗೆ ಪ್ರೇಕ್ಷಕರು ಫಿದಾ
ಶರಣ್ – ನಿಶ್ವಿಕಾ ನಟನೆಯ ಸಿನಿಮಾ
ಖೊಖೊ ಆಟದ ಸುತ್ತ ನಡೆಯುವ ಫಿಲ್ಮ್
ಜಡೇಶ್ ಕೆ ಹಂಪಿ ನಿರ್ದೇಶನದ ಸಿನಿಮಾ
ಟ್ರೈಲರ್ ಮೂಲಕ ಸದ್ದು ಮಾಡ್ತಿರೋ ಫಿಲ್ಮ್
ಎಂಭತ್ತರ ದಶಕದಲ್ಲಿ ಗುರು ಶಿಷ್ಯರು ಸಿನಿಮಾ ಮೂಲಕ ದ್ವಾರಕೀಶ್ ಕನ್ನಡಿಗ ಮನಗೆದ್ದಿದ್ದರು. ಇದೀಗ ಅದೇ ಟೈಟಲ್ ಇಟ್ಟುಕೊಂಡು ನಟ ಶರಣ್ ಕನ್ನಡಿಗರಿಗೆ ಖೊಖೊ ಖದರ್ ತೋರಿಸಲು ಬರುತ್ತಿದ್ದಾರೆ.
ಹೌದು..! ಶರಣ್ ಹಾಗೂ ನಿಶ್ವಿಕಾ ನಾಯ್ಡು ನಟನೆಯ ಗುರು ಶಿಷ್ಯರು ಸಿನಿಮಾದ ಟ್ರೈಲರ್ ಯುಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ತರುಣ್ ಕಿಶೋರ್ ಸುಧೀರ್ ನಿರ್ಮಾಣದ ಈ ಸಿನಿಮಾಗೆ ಜಡೇಶ್ ಕೆ ಹಂಪಿ ಆಕ್ಷನ್ ಕಟ್ ಹೇಳಿದ್ದಾರೆ. ಟ್ರೈಲರ್ ಪ್ರಕಾರ ಖೊಖೊ ಕೋಚ್ ಆಗಿ ಶರಣ್ ಒಂದು ಊರಿಗೆ ಹೋಗ್ತಾರೆ, ಆ ಊರಿನಲ್ಲಿ ಒಂದು ಸಮಸ್ಯೆ ಇರುತ್ತದೆ. ಅದಕ್ಕೆ ಶರಣ್ ಮೂಗು ದೂರಿಸಿ ಡಬಲ್ ಗೇಮ್ ಆಡಲು ಹೋಗ್ತಾರೆ. ಕೊನೆಗೆ ತನ್ನ ತಪ್ಪಿನ ಅರಿವಾಗಿ ಆ ಊರಿನ ಸಮಸ್ಯೆಯನ್ನು ಖೊಖೊ ಮೂಲಕ ಬಗೆಹರಿಸಲು ಮುಂದಾಗುತ್ತಾರೆ.
ಈ ಸಿನಿಮಾದ ವಿಶೇಷವೆಂದರೇ ಹರಿಮೂರು ಜನ ಖೊಖೊ ಆಟಗಾರರ ಪಾತ್ರದಲ್ಲಿ ಆರು ಜನ ಸಿನಿರಂಗದ ನಟರ ಪುತ್ರರು ನಟಿಸಿದ್ದಾರೆ.
ಇನ್ನು ಸಿನಿಮಾದಲ್ಲಿ ಶರಣ್ ಪುತ್ರ ಹೃದಯ್, ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ರವಿಶಂಕರ್ ಗೌಡ ಪುತ್ರ ಸೂರ್ಯ, ನವೀಸ್ ಕೃಷ್ಣ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ನಟಿಸಿದ್ದಾರೆ.
ಇವರಲ್ಲದೇ ಆಸಿಫ್ ಮುಲ್ಲಾ, ಸಾಂಬಶಿವ, ಸಂದೇಶ್, ಸಾಗರ್, ರುದ್ರಗೌಡ, ಅನುಪ್ ರಾಮಣ್ಣ ಮತ್ತು ಅಮಿತ್ ಬಿ ಕೂಡ ಖೊಖೊ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.