ಕಿಂಗ್ ಈಜ್ ಬ್ಯಾಕ್… ಕೊನೆಗೂ ಬಂತು ಶತಕದ ಸಂಭ್ರಮ
ಟೀಂ ಇಂಡಿಯಾದ ರನ್ ಮಿಷಿನ್ ವಿರಾಟ್ ಕೊಹ್ಲಿ ಸಾವಿರ ದಿನಗಳ ನಂತರ ಶತಕದ ಸಂಭ್ರಮ ಆಚರಿಸಿಕೊಂಡಿದ್ದಾರೆ.
ಏಷ್ಯಾಕಪ್ ನಲ್ಲಿ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದರು.
ಇನ್ನಿಂಗ್ಸ್ ಆರಂಭದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 53 ಎಸೆತಗಳಲ್ಲಿ ಸೆಂಚೂರಿ ಗಡಿದಾಟಿದರು.
ಕೊಹ್ಲಿ ಇನ್ನಿಂಗ್ಸ್ ನಲ್ಲಿ 12 ಬೌಂಡರಿ, ಆರು ಸಿಕ್ಸರ್ ಗಳಿವೆ. ಒಟ್ಟಾರೆಯಾಗಿ 61 ಎಸೆತಗಳಲ್ಲಿ 122 ರನ್ ಗಳಿಸಿದ ವಿರಾಟ್, ಟಿ 20 ಕೆರಿಯರ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ್ರು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟಿ 20 ಕ್ರಿಕೆಟ್ ನಲ್ಲಿ ನೂರನೇ ಸಿಕ್ಸರ್ ಸಾಧನೆ ಮಾಡಿದರು. ಇನ್ನು ಟಿ 20 ಕ್ರಿಕೆಟ್ ನಲ್ಲಿ 3500 ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ರು.
ಟೀಂ ಇಂಡಿಯಾದಿಂದ ರೋಹಿತ್ ಶರ್ಮಾ ನಂತರ ಆ ಸಾಧನೆ ಮಾಡಿದ ಎರಡನೇ ಆಟಗಾರನಾಗಿದ್ದಾರೆ.
ಇನ್ನು ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ನಲ್ಲಿ ಇದು 71 ನೇ ಶತಕವಾಗಿತ್ತು.
522 ಇನ್ನಿಂಗ್ಸ್ ಗಳಲ್ಲಿ ವಿರಾಟ್ 71 ಸೆಂಚೂರಿಗಳನ್ನು ಸಿಡಿಸಿದ್ದಾರೆ.
ಇದರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಧಿಕ ಸೆಂಚೂರಿಗಳನ್ನು ಸಿಡಿಸಿದ ಕ್ರಿಕೆಟ್ ಆಟಗಾರರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಜೊತೆಗೆ ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನು ಮೊದಲ ಸ್ಥಾನದಲ್ಲಿ ಟೀಂ ಇಂಡಿಯಾದ ದಿಗ್ಗಜ ಸಚಿನ್ ತೆಂಡುಲ್ಕರ್ ಇದ್ದಾರೆ.
ಮೂರನೇ ಸ್ಥಾನದಲ್ಲಿ 63 ಸೆಂಚೂರಿಗಳೊಂದಿಗೆ ಕುಮಾರ್ ಸಂಗಾಕರ್, 62 ಶತಕಗಳೊಂದಿಗೆ ಜಾಕ್ ಕಾಲಿಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ.