Kiccha | ಸೆ.16ಕ್ಕೆ ತೆಲುಗಿನಲ್ಲಿ ಕೋಟಿಕೊಬ್ಬ 3 ರಿಲೀಸ್
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಇನ್ನೂ ಥಿಯೇಟರ್ ಅಂಗಳದಲ್ಲಿ ಚಾಲ್ತಿಯಲ್ಲಿದೆ. ಈ ನಡುವೆ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ತೆಲುಗು ವರ್ಷನ್ ರಿಲೀಸ್ ಗೆ ಸಜ್ಜಾಗಿದೆ. ಈ ತಿಂಗಳ 16 ರಂದು ಕೆ 3 ಕೋಟಿಕೊಕ್ಕಡು ಟೈಟಲ್ ನಲ್ಲಿ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆಗಿದೆ.
ಪ್ರೇಕ್ಷಕರು ಸಪೋರ್ಟ್ ಮಾಡಬೇಕು. ಮಾಸ್ ಆಕ್ಷನ್ ಎಂಟರ್ ಟೈನರ್ ಆಗಿ ಸೆಟ್ಟೇರಿದ ಈ ಸಿನಿಮಾಗೆ ಪ್ರೇಕ್ಷಕರು ಬೆಂಬಲ ಸೂಚಿಸಬೇಕು ಎಂದು ಶ್ರೇಯಸ್ ಶ್ರಿನಿವಾಸ್ ಮನವಿ ಮಾಡಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾಗೆ ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ. ತೆಲುಗಿನ ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಸಿಂಹಾ, ಗೀತಾ, ಮಾಧುರಿ, ಲಿಪ್ಸಿಕ, ಸತ್ಯಮಣಿ, ಸಾಯಿ ಚರಣ್ ಹಾಡುಗಳನ್ನಾಡಿದ್ದಾರೆ. ಈ ತಿಂಗಳ 13 ರಂದು ಈ ಸಿನಿಮಾದ ಪ್ರಿ ರಿಲೀಜ್ ಕಾರ್ಯಕ್ರಮ ನಡೆಯಲಿದೆ.