Aaron-finch – ಏಕದಿನ ಕ್ರಿಕೆಟ್ ಗೆ ಆರೋನ್ ಫಿಂಚ್ ವಿದಾಯ
ಆಸ್ಟ್ರೇಲಿಯಾದ ಸೀಮಿತ ಓವರ್ ಗಳ ನಾಯಕ ಆರೋನ್ ಫಿಂಚ್ ಸಂಚಲನ ನಿರ್ಧಾರ ತೆಗೆದುಕೊಂಡಿದ್ದಾರೆ.
ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಫಿಂಚ್ ವಿದಾಯ ಘೋಷಿಸಿದ್ದಾರೆ.
ಭಾನುವಾರ ಕೈರ್ನ್ಸ್ ವೇದಿಕೆಯಾಗಿ ನಡೆಯಲಿರುವ ಮೂರನೇ ಏಕದಿನ ಪಂದ್ಯ ಫಿಂಚ್ ಗೆ ಕೊನೆಯ ಮ್ಯಾಚ್ ಆಗಲಿದೆ.
ಆತ ಟಿ 20 ಕ್ರಿಕೆಟ್ ಮೇಲೆ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಂತಹ ಅದ್ಭುತವಾದ ತಂಡದ ಭಾಗವಾಗಿದ್ದು, ನನ್ನ ಅದೃಷ್ಠ ಎಂದು ಭಾವಿಸುತ್ತೇನೆ.
ಆಸೀಸ್ ತಂಡದ ಜೊತೆ ನನ್ನ ಜರ್ನಿ ತುಂಬಾ ಮಧುರವಾಗಿತ್ತು.

ಈ ದಿನ ಏಕದಿನ ಕ್ರಿಕೆಟ್ ನಿಂದ ದೂರವಾಗುತ್ತಿದ್ದೇನೆ.
ನನ್ನ ಈ ಜರ್ನಿಯಲ್ಲಿ ನನಗೆ ಬೆಂಬಲವಾಗಿದ್ದ ಕ್ರಿಕೆಟ್ ಆಸ್ಟ್ರೇಲಿಯಾ, ಅಭಿಮಾನಿಗಳಿಗೆ ನನ್ನ ಕೃತಜ್ಞತೆಗಳು ಎಂದಿದ್ದಾರೆ.
ಅಂದಹಾಗೆ ಕೆಲವು ದಿನಗಳಿಂದ ಏಕದಿನ ಕ್ರಿಕೆಟ್ ನಲ್ಲಿ ಫಿಂಚ್ ವಿಫಲರಾಗುತ್ತಿದ್ದಾರೆ.
ಆತ ಕಳೆದ ಏಳು ಇನ್ನಿಂಗ್ಸ್ ಗಳಲ್ಲಿ ಕೇಲವ 26 ರನ್ ಗಳಿಸಿದ್ದಾರೆ. ಅದರಲ್ಲಿ ಎರಡು ಡಕೌಟ್ ಗಳಿವೆ.
ಇನ್ನು ಫಿಂಚ್ 2013 ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನಾಡಿದ್ದಾರೆ.
ಇಲ್ಲಿಯವರೆಗೂ ಆಸ್ಟ್ರೇಲಿಯಾ ಪರ 145 ಪಂದ್ಯಗಳನ್ನಾಡಿರುವ ಫಿಂಚ್ 5041 ರನ್ ಗಳಿಸಿದ್ದಾರೆ. 54 ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದಾರೆ. ತಮ್ಮ ಏಕದಿನ ವೃತ್ತಿಜೀವನದಲ್ಲಿ 17 ಸೆಂಚೂರಿ, 30 ಅರ್ಧಶತಕಗಳಿವೆ.








