Nikhil Kumaraswamy | ಡಿ.ಕೆ.ಶಿವಕುಮಾರ್ ಸಾಹೇಬರು ಒಬ್ಬ ಅನುಭವಿ ರಾಜಕಾರಣಿ
ಮಂಡ್ಯ : ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿ ಮುಖಾಮುಖಿಯಾಗಿದ್ದರು.
ಮಾಜಿ ಸಚಿವ ಕೆ.ವಿ.ಶಂಕರಗೌಡರ ಪತ್ನಿ ನಿಧನ ಹಿನ್ನೆಲೆ ಸಾಂತ್ವನ ಹೇಳಲು ಬಂದಿದ್ದ ವೇಳೆ ಇಬ್ಬರು ಪರಸ್ಪರ ಭೇಟಿಯಾಗಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ಡಿ.ಕೆ.ಶಿವಕುಮಾರ್ ಸಾಹೇಬರು ಒಬ್ಬ ಅನುಭವಿ ರಾಜಕಾರಣಿ. ಆಕಸ್ಮಿಕವಾಗಿ ಇಬ್ಬರೂ ಭೇಟಿಯಾಗಿದ್ದು ಅಷ್ಟೇ.
ಬೇರೆ ಏನು ಇಲ್ಲ. ಚಲುವರಾಯಸ್ವಾಮಿ ಅವರನ್ನು ಕೈ ಕುಲುಕಿ ಉಭಯ ಕುಶಲೋಪರಿ ವಿಚಾರಿಸಿದ್ದೇನೆ.
ರಾಜಕೀಯವಾಗಿ ನಮ್ಮ ಭಿನ್ನಾಭಿಪ್ರಾಯ ಏನೇ ಇರಬಹುದು. ರಾಜಕೀಯವಾಗಿ ಉತ್ತರ ಕೊಡ್ತೇವೆ.
ಅದನ್ನು ಹೊರತು ಪಡಿಸಿದ್ರೆ, ಯಾರ ಮೇಲೂ ನಮಗೆ ಅಸಮಾಧಾನ ಇಲ್ಲ.
ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣೋದು ನಮ್ಮ ಸಂಸ್ಕೃತಿ. ಅದಕ್ಕೆಲ್ಲಾ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. Nikhil Kumaraswamy meet d k shivakumar mandya