ind-vs-aus | ಸರಿಯಾದ ಬೌಲರ್ ಗಳಿಲ್ಲ.. ಅದಕ್ಕೆ ಸೋತಿದ್ದು
ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು.
ಭಾರತದ ಪರ ಹಾರ್ದಿಕ್ ಪಾಂಡ್ಯ 71 ಅಜೇಯ 71 ರನ್, ಕೆ.ಎಲ್.ರಾಹುಲ್ 55 ರನ್, ಸೂರ್ಯ ಕುಮಾರ್ ಯಾದವ್ 46 ರನ್ ಗಳಿಸಿದರು.
ಇತ್ತ ಆಸ್ಟ್ರೇಲಿಯಾ ತಂಡ 19.2 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಆಸೀಸ್ ಪರ ಕ್ಯಾಮರೋನ್ ಗ್ರಿನ್ 61 ರನ್, ಮ್ಯಾಥ್ಯೂ ವೇಡ್ 45 ರನ್ ಗಳಿಸಿದರು.
ಈ ಪಂದ್ಯದ ಬಳಿಕ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ವೇಳೆ ಪಂದ್ಯ ಸೋಲಲು ಕಾರಣವೇನು ಎಂದು ಪ್ರಶ್ನಿಸಿದರು.
ಇದಕ್ಕೆ ಸ್ವಲ್ಪ ಸಮಯ ಸುಮ್ಮನಿದ್ದ ರೋಹಿತ್ ಶರ್ಮಾ, ನಂತರ ಬೌಲರ್ ಗಳಿಲ್ಲ, ಅದಕ್ಕೆ ಸೋಲು ಕಂಡಿದ್ದೇವೆ. ನಿಮಗೆ ಬೇಕಾದ ಉತ್ತರ ಕೂಡ ಇದೆ ಅಲ್ಲವಾ ಎಂದು ಉತ್ತರಿಸಿದರು.
ಪಂದ್ಯದಲ್ಲಿ ನಾವು ಸರಿಯಾಗಿ ಬೌಲರ್ ಮಾಡಲಾಗಲಿಲ್ಲ. ವಾಸ್ತವಕ್ಕೆ 200 ರನ್ ಗಳು ಒಳ್ಳೆಯ ಸ್ಕೋರ್.. ಪಂದ್ಯವನ್ನು ಕಾಪಿಟ್ಟಿಕೊಳ್ಳಬಹುದಾಗಿತ್ತು.
ನಮ್ಮ ಬ್ಯಾಟರ್ ಒಳ್ಳೆಯ ಪ್ರದರ್ಶನ ನೀಡಿದರು. ಆದ್ರೆ ಸರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.
ಮುಂಬರುವ ಮ್ಯಾಚ್ ನಲ್ಲಿ ಇದನ್ನ ಸರಿ ಮಾಡಿಕೊಳ್ಳುತ್ತೇವೆ. ಈ ಗ್ರೌಂಡ್ ದೊಡ್ಡ ಸ್ಕೋರ್ ಗೆ ಹೆಸರುವಾಸಿ.
200 ರನ್ ಗಳಿಸಿದ್ದೇವೆ ಅಂತಾ ನಾವು ರಿಲ್ಯಾಕ್ಸ್ ಆಗೋದು ತುಂಬಾ ತಪ್ಪು. ಆದ್ರೆ ಆಸ್ಟ್ರೇಲಿಯಾ ತಂಡ ಒಳ್ಳೆಯ ಪ್ರದರ್ಶನ ನೀಡಿದೆ ಎಂದು ರೋಹಿತ್ ಶರ್ಮಾ ಹೇಳಿದರು.
ನಮ್ಮ ಕಳಫೆ ಫಿಲ್ಡಿಂಗ್, ಬೌಲಿಂಗ್ ನಿಂದ ನಾವು ಸೋತಿದ್ದೇವೆ. ನಮ್ಮ ಪ್ರಮುಖ ಬೌಲರ್ ಗಳಾದ ಭುನವೇಶ್ವರ್ ಕುಮಾರ್, ಹರ್ಷಲ್ ಪಟೇಲ್ ವಿಫಲಾದರು ಎಂದು ರೋಹಿತ್ ಶರ್ಮಾ ಬೇಸರ ಹೊರಹಾಕಿದರು.