Congress | ಚೀತಾ ಬಂತು ಎಂದು ಬೀಗಿದವರು ರೂಪಾಯಿ ಕುಸಿತಕ್ಕೆ ಮೌನ
ಬೆಂಗಳೂರು : ಚೀತಾ ಬಂತು ಎಂದು ಬೀಗಿದವರು ರೂಪಾಯಿ ಕುಸಿತಕ್ಕೆ ಮೌನವಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕುಟುಕಿದೆ.
ರಾಜ್ಯ ಶಿಕ್ಷಣ ಇಲಾಖೆ ಲೇಖಕ ದೇವನೂರು ಮಹಾದೇವ ಹಾಗೂ ಜಿ.ರಾಮಕೃಷ್ಣ ಸೇರಿ ಏಳು ಲೇಖಕರ ಪಠ್ಯವನ್ನು ಕೈಬಿಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 40 ಪರ್ಸೆಂಟ್ ಸರ್ಕಾರ ಮಕ್ಕಳ ಭವಿಷ್ಯವನ್ನು ಅಕ್ಷರಶಃ ಸರ್ವನಾಶ ಮಾಡ್ತಿದೆ.ತಿದ್ದೋಲೆಯ ನಂತರ ಮತ್ತೊಂದು ಸುತ್ತೋಲೆ! ಸರ್ಕಾರದ ‘ಪಠ್ಯ ಪುಸ್ತಕ ಪರಿಷ್ಕರಣೆ’ ಎಂಬ ಬೌದ್ಧಿಕ ದಿವಾಳಿತನದ ಕೆಲಸದ ಅವಾಂತರ ಇನ್ನೂ ನಿಂತಿಲ್ಲ. ಅನುಮತಿ ಹಿಂಪಡೆದ ಸಾಹಿತಿಗಳ ಪಠ್ಯವನ್ನು ಬೋಧನೆಯಿಂದ ಹಿಂಪಡೆಯಲಾಗಿದೆ, ಹೀಗಾದಲ್ಲಿ ಮಕ್ಕಳು ಓದುವುದು ಏನನ್ನ?

ಅನುಮತಿ ನಿರಾಕರಿಸಿದ ಸಾಹಿತಿಗಳ ಪಠ್ಯವು ಪುಸ್ತಕದಲ್ಲಿ ಇಲ್ಲವೇ ಇಲ್ಲ ಎಂದಿದ್ದರು ಬಿ.ಸಿ.ನಾಗೇಶ್. ಹಾಗಿದ್ರೆ ಈಗ ಸುತ್ತೋಲೆ ಹೊರಡಿಸಿದ್ದು ಏಕೆ? ಅರ್ಧ ಶೈಕ್ಷಣಿಕ ವರ್ಷ ಕಳೆದರೂ ಇನ್ನೂ ಪಠ್ಯದ ಗೊಂದಲ ಬಗೆಹರಿಯದೆ ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿದಿರುವುದಕ್ಕೆ ಹೊಣೆ ಯಾರು? #40ಪರ್ಸೆಂಟ್ ಸರ್ಕಾರ ಉತ್ತರಿಸುವುದೇ ಎಂದು ಪ್ರಶ್ನಿಸಿದೆ.
ಚೀತಾ ಬಂತು ಎಂದು ಬೀಗಿದವರು ರೂಪಾಯಿ ಕುಸಿತಕ್ಕೆ ಮೌನವಾಗಿದ್ದಾರೆ! 2014ರಿಂದ ಸತತ ಕುಸಿತ ಕಾಣುತ್ತಿರುವ ರೂಪಾಯಿ ಮೌಲ್ಯ ಇಂದು ಐತಿಹಾಸಿಕ ಕುಸಿತ ಕಂಡಿದೆ, ಜನಸಾಮಾನ್ಯರ ಜೇಬಿನ ತೂತು ಇನ್ನಷ್ಟು ದೊಡ್ಡದಾಗಲಿದೆ, ಇದೇನಾ ಅಚ್ಛೆ ದಿನ್? ವೇದಿಕೆ ಕುಟ್ಟಿ ಸುಳ್ಳಿನ ಭಾಷಣ ಬಿಗಿದಿದ್ದ ಡಾಲರ್ ನಳಿನಣ್ಣ ಯಾನೆ ನಳಿನ್ ಕುಮಾರ್ ಕಟೀಲ್ ಅವರು ಈಗ ಎಲ್ಲೋದ್ರು ಎಂದು ಕುಟುಕಿದೆ.








