Tecno Pova Neo 5G – ಅತಿ ಕಡಿಮೆ ಬೆಲೆಯ 5G ಸ್ಮಾರ್ಟ್ಫೋನ್!
ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ತನ್ನ ಮೊಟ್ಟಮೊದಲ 5ಜಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದ ಟೆಕ್ನೋ ಕಂಪನಿ ಕಳೆದ ವಾರ ಟೆಕ್ನೋ ಪೋವಾ ನಿಯೋ 5 ಜಿ ಮೊಬೈನ್ ಅನಾವರಣ ಮಾಡಿತ್ತು. ಈ ಮೊಬೈನ್ ಇಂದಿನಿಂದ ಖರೀದಿಗೆ ಲಭ್ಯವಿದೆ.
ಈ ಮೊಬೈಲ್ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ರಿಲೀಸ್ ಆಗಿದ್ದು, 4 ಜಿಬಿ ರ್ಯಾಮ್ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಇದರ ಬೆಲೆ 15,400 ರೂಪಾಯಿ.

ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವು 5 ಜಿಬಿ ಮೊಬೈನ್ ಗಳ ಸಾಲಿಗೆ ಟೆಕ್ನೋ ಪೋವಾ ನಿಯೋ 5 ಜಿ ಸ್ಮಾರ್ಟ್ ಫೋನ್ ಕೂಡ ಸೇರ್ಪಡೆಗೊಂಡಿದೆ.
ಇದು ಆಂಡ್ರಾಯ್ಡ್ 12 ಆಧಾರಿತ HI os 8.6 ನಲ್ಲಿ ರನ್ ಆಗಲಿದೆ. ಕ್ವಾಡ್ ಫ್ಲಾಷ್ ಬೆಂಬಲಿಸುವ AI ಡ್ಯುಯಲ್ ರಿಯಲ್ ಕ್ಯಾಮೆರಾ ಸೆಟ್ ಅಪ್ ಹೊಂದಿದೆ.
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
6000mah ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.









