Congress – ವೈಫಲ್ಯಗಳ ಸರದಾರ ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು : ವೈಫಲ್ಯಗಳ ಸರದಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹುದ್ದೆಯಲ್ಲಿರಲು ಅನರ್ಹ ಎಂದು ರಾಜ್ಯ ಕಾಂಗ್ರೆಸ್ ಕುಟುಕಿದೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ, ಔಷಧ ಪೂರೈಕೆದಾರರ ಬಿಲ್ ಪಾಸ್ ಮಾಡಲು ಕಮಿಷನ್ ಕಿರುಕುಳ, ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೊರತೆಯಿಂದ ಸಾವು, ಕೆಲಸ ಮಾಡದ ಡಯಾಲಿಸಿಸ್ ಕೇಂದ್ರಗಳು, ಕೆಲಸ ಮಾಡದ 108 ಸೇವೆ, ರೋಗಿಗಳ ಸಾವು. ವೈಫಲ್ಯಗಳ ಸರದಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹುದ್ದೆಯಲ್ಲಿರಲು ಅನರ್ಹ.

108 ಆಂಬುಲೆನ್ಸ್ ಸಿಬ್ಬಂದಿಗೆ ವೇತನ ನೀಡದೆ ಸತಾಯಿಸಿದ್ದ ಸರ್ಕಾರ ಈಗ 108 ಕಾಲ್ ಸೆಂಟರ್ ಸೇವೆ ನಿರ್ವಹಿಸುವುದರಲ್ಲೂ ವಿಫಲವಾಗಿದೆ. ರಾಜಕೀಯ ಹೇಳಿಕೆ ಕೊಡಲು ಅತ್ಯುತ್ಸಾಹದಿಂದ ಓಡೋಡಿ ಬರುವ ಸಚಿವ ಡಾ.ಕೆ.ಸುಧಾಕರ್ ಅವರಿಗೆ ತಮ್ಮ ಇಲಾಖೆಯ ಕೆಲಸಗಳನ್ನು ನಿರ್ವಹಿಸಲು ಮಾತ್ರ ಸಮಯವೂ ಇಲ್ಲ, ಆಸಕ್ತಿಯೂ ಇಲ್ಲ ಎಂದು ಕಿಡಿಕಾಡಿದೆ.
ಗ್ರಾಮ ಪಂಚಾಯ್ತಿಗಳಿಗೆ ಗಾಂಧಿ ಪುರಸ್ಕಾರದ ಹಣವಿಲ್ಲ. ದಸರಾ ಕ್ರೀಡಾಕೂಟಕ್ಕೆ ಅನುದಾನ ಕೊಡಲಿಲ್ಲ. ಖಜಾನೆಯ ಹಣ 40% ಲೂಟಿಯಲ್ಲೇ ಖಾಲಿ ಆಯ್ತೆ #PayCM ಬಸವರಾಜ ಬೊಮ್ಮಾಯಿ ಅವರೇ? ರಾಜ್ಯದ ಆರ್ಥಿಕತೆ ಇಷ್ಟು ಅಧೋಗತಿಗೆ ಇಳಿದಿದೆಯೇ? 40 ಪರ್ಸೆಂಟ್ ಸರ್ಕಾರ ನಾಡದಸರಾದ ಕ್ರೀಡಾಕೂಟಕ್ಕೆ ಹಣ ನೀಡದೆ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅಪಚಾರವೆಸಗಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.









