Sir vivian richards | ರೋಹಿತ್ ಶರ್ಮಾಗೆ ನಾನು ವೀರಾಭಿಮಾನಿ
ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ವಿವಿಎನ್ ರಿಚರ್ಡ್ಸ್ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನನಗೆ ರೋಹಿತ್ ಶರ್ಮಾ ಅಂದ್ರೆ ತುಂಬಾ ಇಷ್ಟ. ಮುಖ್ಯವಾಗಿ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ರೋಹಿತ್ ಶರ್ಮಾ ಆಡಿದ ಇನ್ನಿಂಗ್ಸ್ ಗಳ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆ.
ರೋಹಿತ್ ಶರ್ಮಾ ಕ್ಯಾಪ್ಟನ್ ಆಗುವುದಕ್ಕೂ ಮುನ್ನವೇ ನಾನು ಆತನಿಗೆ ವೀರಾಭಿಮಾನಿ ಎಂದು ರಿಜರ್ಡ್ಸ್ ಹೇಳಿದ್ದಾರೆ.
ಇದೇ ವೇಳೆ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ರಿಜರ್ಡ್ಸ್, ಸಚಿನ್, ವಿರಾಟ್ ಕೊಹ್ಲಿ ಅಂದರೇ ನನಗೆ ತುಂಬಾ ಗೌರವ.
ಅವರಿಗೂ ನಾನೆಂದರೇ ಅಭಿಮಾನ ಇದೆ. ಅವರ ಗೆಲುವುಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ನಿಜ ಹೇಳಬೇಕೆಂದರೇ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಯವರ ಆಟವನ್ನು ನಾನು ತುಂಬಾ ಆರಾಧಿಸುತ್ತೇನೆ.
ಈ ದಿನ ಟೀಂ ಇಂಡಿಯಾ ಈ ಸ್ಥಿತಿಯಲ್ಲಿದೆ ಅಂದ್ರೆ ಇಂತಹ ದೊಡ್ಡ ಆಟಗಾರರಿಂದಲೇ.
ಇಂಡಿಯಾದಲ್ಲಿ ಸಾಕಷ್ಟು ಮಂದಿ ದೊಡ್ಡ ಆಟಗಾರರಿದ್ದಾರೆ. ಆದ್ರೆ ಈ ಇಬ್ಬರಿಂದಲೇ ಇದು ಸಾಧ್ಯವಾಯ್ತು ಎಂದು ವಿವಿಎಸ್ ರಿಚರ್ಡ್ಸ್ ಹೇಳಿದ್ದಾರೆ.