BJP – “ನೂರು ಲಕ್ಷ ಕೋಟಿ ಸಾಲ” ಸಿದ್ದು ಹೇಳಿಕೆಗೆ ಬಿಜೆಪಿ ಕಿಡಿ
ಬೆಂಗಳೂರು : ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ 8 ವರ್ಷಗಳಲ್ಲಿ ಒಂದು ನೂರು ಲಕ್ಷ ಕೋಟಿ ಸಾಲ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಇದಕ್ಕೆ ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮ ಸಾಲದ ಇತಿಹಾಸ ತೆರೆದಿಡುತ್ತಿದ್ದೇವೆ. ಮೋದಿ ಸರ್ಕಾರ ಸಾಲ ಮಾಡಿ ತನ್ನ ಪರಿವಾರದ ಜೋಳಿಗೆ ತುಂಬಿಸಿಕೊಂಡಿಲ್ಲ “ನಕಲಿ ಗಾಂಧಿ ಪರಿವಾರದಂತೆ”. ದೇಶವಿಂದು ವೈಭವದಿಂದ ಕಂಗೊಳಿಸುತ್ತಿದೆ, ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚೇಕೆ?
ವಿಪಕ್ಷ ನಾಯಕ @siddaramaiah ಅವರಿಗೆ ತಾವು ಮಾಡಿದ ಸಾಲದ ಬಗ್ಗೆ ಜಾಣ ಮರೆವು ಏಕೆ?
2013 – 20 ಸಾವಿರ ಕೋಟಿ
2014 – 21 ಸಾವಿರ ಕೋಟಿ
2015 – 21 ಸಾವಿರ ಕೋಟಿ
2016 – 28 ಸಾವಿರ ಕೋಟಿ
2017 – 35 ಸಾವಿರ ಕೋಟಿನಿಮಗೆ ಮರೆತು ಹೋಗಿರಬಹುದು, ರಾಜ್ಯದ ಜನತೆ ಮರೆತಿಲ್ಲ.#ಸಾಲರಾಮಯ್ಯ
— BJP Karnataka (@BJP4Karnataka) October 12, 2022
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಾವು ಮಾಡಿದ ಸಾಲದ ಬಗ್ಗೆ ಜಾಣ ಮರೆವು ಏಕೆ? 2013 ರಲ್ಲಿ 20 ಸಾವಿರ ಕೋಟಿ, 2014ರಲ್ಲಿ 21 ಸಾವಿರ ಕೋಟಿ, 2015ರಲ್ಲಿ 21 ಸಾವಿರ ಕೋಟಿ, 2016ರಲ್ಲಿ 28 ಸಾವಿರ ಕೋಟಿ, 2017ರಲ್ಲಿ 35 ಸಾವಿರ ಕೋಟಿ. ನಿಮಗೆ ಮರೆತು ಹೋಗಿರಬಹುದು, ರಾಜ್ಯದ ಜನತೆ ಮರೆತಿಲ್ಲ.

ಅಧಿಕಾರದುದ್ದಕ್ಕೂ ನಿದ್ದೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಹೇಗೆ ಮರೆಯಲು ಸಾಧ್ಯ ಸಿದ್ದರಾಮಯ್ಯ? ಕಾಂಗ್ರೆಸ್ಸಿನ ತುಘಲಕ್ ದರ್ಬಾರಿನಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆಯೂ ₹ 44,769/- ಸಾಲದ ಹೊರೆ ಹೊರೆಸಿದ್ದನ್ನು ಮರೆತಿರಾ ಎಂದು ಪ್ರಶ್ನಿಸಿದೆ.








