Liz Truss – ಅತಿ ಕಡಿಮೆ ಅವಧಿಯಲ್ಲಿ ಪ್ರಧಾನಿ ಹುದ್ದೆ ಕಳೆದುಕೊಂಡವರು ಇವರೇ
ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದು, ಪ್ರಪಂಚದಾದ್ಯಂತ ಚರ್ಚೆಗೆ ಕಾರಣವಾಗಿದೆ.
ಕಳೆದ ಆರು ವರ್ಷಗಳಲ್ಲಿ ನಾಲ್ಕು ಮಂದಿ ಪ್ರಧಾನಿಗಳು ಬದಲಾಗಿದ್ದು, ಯುಕೆಯಲ್ಲಿನ ರಾಜಕೀಯ ಅಸ್ತಿರತೆಯನ್ನು ಪ್ರತಿಬಿಂಬಿಸುತ್ತಿದೆ.
ಟ್ರಸ್ ರಾಜೀನಾಮೆ ಸೋಶೀಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಹಾಗಾದ್ರೆ ಪ್ರಪಂಚದಲ್ಲಿ ಅತ್ಯಂತ ಕಡಿಮೆ ಅವಧಿಗೆ ಪ್ರಧಾನಿ ಹುದ್ದೆಯನ್ನು ಕಳೆದುಕೊಂಡವರು ಯಾರು ?
ಲಿಜ್ ಟ್ರಸ್.. ಬ್ರಿಟನ್ ಪ್ರಧಾನಿಯಾಗಿ ಸೆಪ್ಟೆಂಬರ್ ಆರರಂದು ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಸಮ್ಮುಖದಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
ಆದ್ರೆ ಅಧಿಕಾರ ಸ್ವೀಕರಿಸಿದ 45 ದಿನಗಳಲ್ಲಿ ಟ್ರಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದರೊಂದಿಗೆ ಲಿಜ್ ಬ್ರಿಟನ್ ಚರಿತ್ರೆಯಲ್ಲಿ ಅತ್ಯಂತ ಕಡಿಮೆ ಕಾಲ ಕೆಲಸ ಮಾಡಿದ ಪ್ರಧಾನಿಯಾಗಿದ್ದಾರೆ.
ಇದಕ್ಕೂ ಮೊದಲು ಜಾರ್ಜ್ ಕಾನಿಂಗ್ 119 ದಿನಗಳ ಕಾಲ ಬ್ರಿಟನ್ ಪ್ರಧಾನಿಯಾಗಿದ್ದರು.
ಅಟಲ್ ಬಿಹಾರಿ ವಾಜಪೇಯಿ.. 16 ದಿನಗಳ ಕಾಲ ದೇಶದ ಪ್ರಧಾನಿಯಾಗಿದ್ದರು.
ಮೇ 16 ರಿಂದ ಜೂನ್ 1 ನೇ ತಾರೀಕಿನವೆರೆಗೂ ಪ್ರಧಾನಿಯಾಗಿದ್ದರು.
ವಾಜಪೇಯಿಗೂ ಮೊದಲು ಗುಲ್ಜಾರಿ ಲಾಲ್ ಕೇವಲ 13 ದಿನಗಳ ದೇಶದ ಪ್ರಧಾನಿಯಾಗಿದ್ದರು.
1967ರಲ್ಲಿ ಸಿಯೆರ್ರಾ ಲಿಯಾನ್ ಎಲೆಕ್ಷನ್ ನಲ್ಲಿ ಗೆಲುವು ಸಾಧಿಸಿದ ಸಿಯಾಕಾ ಸ್ಟಿವೆನ್ಸ್ ಪ್ರಧಾನಿಯಾಗಿದ್ದರು.
ಆದ್ರೆ ಕೇವಲ ಒಂದು ಗಂಟೆಯ ಅವಧಿಯಲ್ಲಿ ಅವರನ್ನ ಅರೆಸ್ಟ್ ಮಾಡಲಾಯಿತು.