Madhya Pradesh | ಟ್ರಕ್ ಗೆ ಗುದ್ದಿದ ಬಸ್ 14 ಸಾವು.. 40 ಮಂದಿಗೆ ಗಾಯ
ಭೋಪಾಲ್ : ಟ್ರಕ್ ಗೆ ಬಸ್ ಗುದ್ದಿದ್ದ ಪರಿಣಾಮ ಬಸ್ ನಲ್ಲಿದ್ದ 14 ಮಂದಿ ಮೃತಪಟ್ಟು 40 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ರೇವಾ ಬಳಿ ನಡೆದಿದೆ.
ಹೈದರಾಬಾದ್ ನಿಂದ ಗೋರಖ್ ಪುರಕ್ಕೆ ಸಂಚರಿಸುತ್ತಿದ್ದ ಬಸ್ ಟ್ರಕ್ ಗೆ ಡಿಕ್ಕಿ ಹೊಡೆದಿದೆ.

ಇದರಿಂದ ಬಸ್ ನಲ್ಲಿದ್ದ 14 ಮಂದಿ ಮೃತಪಟ್ಟಿದ್ದಾರೆ.
40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಉತ್ತರ ಪ್ರದೇಶ ಮೂಲದವರು ಎಂದು ರೇವಾದ ಎಸ್ ಪಿ ನವನೀತ್ ಭಾಸಿನ್ ಮಾಹಿತಿ ನೀಡಿದ್ದಾರೆ.








