Narendra modi – ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಮೋದಿ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಯೋಧರೊಂದಿಗೆ ಸಂಭ್ರಮದಿಂದ ದೀಪಾವಳಿ ಆಚರಿಸಿಕೊಂಡಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದಾಗಿನಿಂದಲೂ ಅಂದರೇ 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರತಿ ವರ್ಷದ ದೀಪಾವಳಿ ಆಚರಣೆಗೆ ವಿವಿಧ ಮಿಲಿಟರಿ ಸೌಲಭ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ.

ಅದರಂತೆ ಇಂದು ಕೂಡ ಪ್ರಧಾನಿ ಕಾರ್ಗಿಲ್ ಯುದ್ಧಭೂಮಿಗೆ ತೆರಳಿ ಸೈನಿಕರಿಂದ ದೀಪಾವಳಿ ಆಚರಣೆ ಮಾಡಿದ್ದಾರೆ.
ಇನ್ನು ದೇಶದ ಜನರಿಗೆ ಮೋದಿ ದೀಪಾವಳಿಯ ಶುಭಾಶಯ ತಿಳಿಸಿದ್ದು, ದೇಶದ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು.
ದೀಪಾವಳಿ ಹಬ್ಬ ಕಾಂತಿ ಹಾಗೂ ಹೊಳಪಿಗೆ ಸಂಬಂಧಿಸಿದೆ. ಈ ಪವಿತ್ರ ಹಬ್ಬವು ನಮ್ಮ ಜೀವನದಲ್ಲಿ ಸಂತೋಷ ಮತ್ತು ಯೋಗಕ್ಷೇಮದ ಉತ್ಸಾಹ ಹೆಚ್ಚಿಸಲಿ ಎಂದು ಬರೆದುಕೊಂಡಿದ್ದಾರೆ.








