Eclipse – ಬೆಂಗಳೂರಿನ ಮೇಲೆ ಗ್ರಹಣದ ಎಫೆಕ್ಟ್
ಬೆಂಗಳೂರು : ಕೇತುಗ್ರಸ್ಥ ಸೂರ್ಯ ಗ್ರಹಣದ ಪರಿಣಾಮ ರಾಶಿ, ನಕ್ಷತ್ರಗಳ ಮೇಲೆ ಬೀರುವುದಲ್ಲದೆ ರಾಜ್ಯ ರಾಜಧಾನಿ ಬೆಂಗಳೂರಿನ ಮೇಲೂ ಬೀರಿದೆ. ಅಂದರೆ ಪ್ರತಿನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರಿನ ಬಹುತೇಕ ಜಾಗಗಳು ಬಿಕೋ ಎನ್ನುತ್ತಿವೆ.
ಮುಖ್ಯವಾಗಿ ದಿನಂಪ್ರತಿ ಲಕ್ಷಾಂತರ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದುಕೊಂಡು ಹೋಗುವ ಹಾಗೆ ಜನರಿಂದ ತುಂಬಿ ತುಳುಕುತ್ತಿದ್ದ ಬಿಎಂಟಿಸಿ ಬಸ್ ಗಳು ಇಂದು ಖಾಲಿ ಖಾಲಿಯಾಗಿ ಓಡಾಡುತ್ತಿವೆ.

ಹೋಟೆಲ್ ಗಳು ಕಥೆಯೂ ಹಾಗೆ ಇದ್ದು, ಬೆಳಿಗ್ಗೆಯಿಂದ ಹೋಟೆಲ್ ಗಳು ಓಪನ್ ಆಗಿದ್ದರೂ ಜನರು ಅತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ಕೆಲವು ಹೋಟೆಲ್ ಗಳು ಮುಂಜಾನೇಯಿಂದಲೇ ಬಂದ್ ಮಾಡಲಾಗಿದೆ.
ಪ್ರತಿ ದಿನ ವಾಹನಗಳಿಂದ ತುಂಬಿದ್ದ ರಸ್ತೆಗಳು, ಮಾಲ್ ಗಳು ಎಲ್ಲವೂ ಇಂದು ಖಾಲಿ ಖಾಲಿಯಾಗಿವೆ.








