BJP- ಕಲಬುರಗಿಯಲ್ಲಿ ನಾಳೆ ಬಿಜೆಪಿ ಓಬಿಸಿ ಸಮಾವೇಶ
ಕಲಬುರಗಿ : ಕಲಬುರಗಿ ನಗರದಲ್ಲಿ ನಾಳೆ ಬಿಜೆಪಿ ಯಿಂದ ಓಬಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಆದ್ರೆ ಇದೀಗ ರಾಜಕೀಯ ವಾಕ್ಸಮಕ್ಕೆ ಕಾರಣವಾಗಿದೆ. ಸಮಾವೇಶ ಬಹಿಷ್ಕರಿಸೋದಾಗಿ ಕೋಲಿ ಕಬ್ಬಲಿಗ ಸಮಾಜದ ಅನೇಕ ಮುಖಂಡರ ಹೇಳಿಕೆ ನೀಡಿದ್ದಾರೆ.
ಕಲಬುರಗಿ ನಗರದಲ್ಲಿ ಮಾಜಿ ಎಂಎಲ್ಸಿಸಿ ತಿಪ್ಪಣ್ಣಪ್ಪ ಕಮಕನೂರ್ ಸುದ್ದಿಗೋಷ್ಟಿ ನಡೆಸಿದ್ದು, ಕೋಲಿ, ಕಬ್ಬಲಿಗ ಸಮಾಜವನ್ನು ಈ ಹಿಂದೆ ಎಸ್ಟಿ ಗೆ ಸೇರಿಸಲು ಹೇಳಿದ್ದರು.

ಪ್ರಧಾನಿ ಮೋದಿ ಸೇರಿದಂತೆ ಅನೇಕ ನಾಯಕರು ಹೇಳಿದ್ದರು. ಆದ್ರೆ ಇಲ್ಲಿವರಗೆ ಎಸ್ಟಿಗೆ ಸೇರ್ಪಡೆ ಮಾಡಿಲ್ಲಾ, ಹೀಗಾಗಿ ಕಾರ್ಯಕ್ರಮ ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ನಾಳೆ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಈ ಸಮಾಜಕ್ಕೆ ಎಸ್ಟಿಗೆ ಸೇರ್ಪಡೆ ಮಾಡೋ ಬಗ್ಗೆ ಘೋಷಣೆ ಮಾಡಬೇಕು, ಇಲ್ಲದಿದ್ದರೆ ಬಿಜೆಪಿ ನಾಯಕರು ಸಮಾಜದ ಕ್ಷಮೆ ಕೇಳಬೇಕು ಅಂತ ಆಗ್ರಹ ಮಾಡಿದ್ದಾರೆ.








