Congress – ಬಿಜೆಪಿಗೆ ಧಿಮಾಕು ಬಂದಿರುವುದು ಭ್ರಷ್ಟಾಚಾರದಿಂದ
ಬೆಂಗಳೂರು : ಸುಧಾಕರ್ ಅವರೇ, ಸ್ಕಾಚ್, ವಾಚ್, ಗೋಲ್ಡ್ ಕಾಯಿನ್ ಅಲ್ಲದೆ ಇನ್ನೂ ಏನೇನಿದೆ ಈ ಬಾಕ್ಸ್ನಲ್ಲಿ? ಎಲ್ಲವನ್ನೂ ಹಣದಿಂದ ಖರೀದಿಸುತ್ತೇವೆ ಎಂಬ ಧಿಮಾಕು ಬಿಜೆಪಿಗೆ ಬಂದಿರುವುದು ಭ್ರಷ್ಟಾಚಾರದಿಂದ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಸಚಿವ ಸುಧಾಕರ್ ವಿರುದ್ಧ ರಾಜ್ಯ ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಸಚಿವ ಸುಧಾಕರ್ ಅವರ ಕಡೆಯಿಂದಲೂ ಪತ್ರಕರ್ತರಿಗೆ ದುಬಾರಿ ಬೆಲೆ ಲಂಚ ರೂಪದ ಉಡುಗೊರೆ ನೀಡಿರುವ ಸಂಗತಿ ಹೊರಬಂದಿದೆ.
ಸರ್ಕಾರದ ಲಂಚದ ಬಾಕ್ಸ್ ಬೇಡ, ನಮ್ಮ ಲಂಚ್ ಬಾಕ್ಸ್ ಅಷ್ಟೇ ಸಾಕು ಎನ್ನುವ ಪ್ರಾಮಾಣಿಕ ಪತ್ರಕರ್ತರಿಂದ ಸರ್ಕಾರದ ಮಹಾ ಅಕ್ರಮ ಹೊರಬಿದ್ದಿದೆ.
'@mla_sudhakar ಅವರೇ, ಸ್ಕಾಚ್, ವಾಚ್, ಗೋಲ್ಡ್ ಕಾಯಿನ್ ಅಲ್ಲದೆ ಇನ್ನೂ ಏನೇನಿದೆ ಈ ಬಾಕ್ಸ್ನಲ್ಲಿ?
ಎಲ್ಲವನ್ನೂ ಹಣದಿಂದ ಖರೀದಿಸುತ್ತೇವೆ ಎಂಬ ಧಿಮಾಕು ಬಿಜೆಪಿಗೆ ಬಂದಿರುವುದು ಭ್ರಷ್ಟಾಚಾರದಿಂದ. pic.twitter.com/97DM3Id8bI
— Karnataka Congress (@INCKarnataka) October 29, 2022
ಸಚಿವ ಡಾ.ಕೆ.ಸುಧಾಕರ್ ಅವರೇ, ಏಕೆ ಈ ಬಗ್ಗೆ ತಾವು ತುಟಿ ಬಿಚ್ಚುತ್ತಿಲ್ಲ? ಅಕ್ರಮ ಮುಚ್ಚಿಕೊಳ್ಳಲು ಸರ್ಕಾರ ಯಾವ ಹಂತಕ್ಕೆ ಬೇಕಿದ್ದರೂ ಇಳಿಯಬಹುದು ಎನ್ನಲು ಪತ್ರಕರ್ತರಿಗೆ ಲಂಚ ನೀಡಿದ ಈ ಪ್ರಕರಣವೇ ನಿದರ್ಶನ ಎಂದು ಆಕ್ರೋಶ ಹೊರಹಾಕಿದೆ.
ಸರ್ಕಾರದ ಲಂಚದ ಬಾಕ್ಸ್ ಬೇಡ, ನಮ್ಮ ಲಂಚ್ ಬಾಕ್ಸ್ ಅಷ್ಟೇ ಸಾಕು ಎನ್ನುವ ಪ್ರಾಮಾಣಿಕ ಪತ್ರಕರ್ತರಿಂದ ಸರ್ಕಾರದ ಮಹಾ ಅಕ್ರಮ ಹೊರಬಿದ್ದಿದೆ.

ಸುಧಾಕರ್ ಅವರೇ, ಸ್ಕಾಚ್, ವಾಚ್, ಗೋಲ್ಡ್ ಕಾಯಿನ್ ಅಲ್ಲದೆ ಇನ್ನೂ ಏನೇನಿದೆ ಈ ಬಾಕ್ಸ್ನಲ್ಲಿ?
ಎಲ್ಲವನ್ನೂ ಹಣದಿಂದ ಖರೀದಿಸುತ್ತೇವೆ ಎಂಬ ಧಿಮಾಕು ಬಿಜೆಪಿಗೆ ಬಂದಿರುವುದು ಭ್ರಷ್ಟಾಚಾರದಿಂದ ಎಂದು ಕಿಡಿಕಾರಿದೆ.








