Mysore – ಇಸ್ಪೀಟ್ ಆಡುವಾಗ ವ್ಯಕ್ತಿ ಸಾವು
ಮೈಸೂರು : ಇಸ್ಪೀಟ್ ಆಡುತ್ತಿರುವಾಗ ವ್ಯಕ್ತಿಯೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಅಶ್ವಥ್ ಚಿಯಾ ಮೃತ ವ್ಯಕ್ತಿಯಾಗಿದ್ದು, ಈತ ಮೈಸೂರು ಜೆಡಿಎಸ್ ಮುಖಂಡರಾಗಿದ್ದರು.
ಸ್ನೇಹಿತರ ಜೊತೆ ಅಶ್ವಥ್ ಚಿಯಾ ಇಸ್ಪೀಟ್ ಆಡುವಾಗ ಹೃದಯಾಘಾತ ಸಂಭವಿಸಿದ್ದು, ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆದ್ರೆ ಅಷ್ಟೋತ್ತಿಗಾಗಲೇ ಅಶ್ವತ್ ಅವರು ಕೊನೆಯುಸಿರೆಳೆದಿದ್ದಾರೆ.
ಅಶ್ವಥ್ ಕೊನೆಯ ಕ್ಷಣಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.