ADVERTISEMENT
Saturday, September 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Politics – ಬಿಗಡಾಯಿಸಿದ ವ್ಯವಸ್ಥೆ ಯುವ ನಿಷ್ಟವಂತರಿಗೆ ರಾಜಕೀಯ ಪ್ರವೇಶಕ್ಕೆ ಪ್ರಸಕ್ತ ಕಾಲ

Mahesh M Dhandu by Mahesh M Dhandu
November 5, 2022
in Newsbeat, Marjala Manthana, ಮಾರ್ಜಲ ಮಂಥನ
Politics

Politics

Share on FacebookShare on TwitterShare on WhatsappShare on Telegram

Politics – ಬಿಗಡಾಯಿಸಿದ ವ್ಯವಸ್ಥೆ ಯುವ ನಿಷ್ಟವಂತರಿಗೆ ರಾಜಕೀಯ ಪ್ರವೇಶಕ್ಕೆ ಪ್ರಸಕ್ತ ಕಾಲ

ಭಾರತವು ಅಳವಡಿಸಿಕೊಂಡಿರೋ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿಂದ ಬೇಕಾದರು ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ.ತೀರಾ ಸಹಜವಾದ ಅರ್ಹತೆಯನ್ನ ಭಾರತೀಯ ಚುನಾವಣಾ ಆಯೋಗವು ಪಾಲಿಸುತ್ತದೆ.ಇಂತಹ ಸರಳಿಕೃತ ಮತ್ತು ಹೆಚ್ಚು ಲಿಬರಲ್ ಆಗಿರುವ ನೀತಿಗಳನ್ನ ಬಳಸಿಕೊಂಡು ಪ್ರಭಾವಿಗಳು, ಉದ್ಯಮಿಗಳು, ಭೂಮಾಲಿಕರು ಸೇರಿದಂತೆ ಬರಿ ಉಳ್ಳವರ ಪಾಲಾಗಿರುವ ಭಾರತದ ವ್ಯವಸ್ಥೆಯು ಭ್ರಷ್ಟಚಾರ, ಮೋಸ, ಅನೈತಿಕ ಮೈತ್ರಿಗಳಿಂದ ಕೂಡಿದೆ.ಅತ್ಯಂತ ಸಂಕೀರ್ಣ ಮತ್ತು ಸಮಸ್ಯೆಯಾತ್ಮವಾಗಿರೋ ಭಾರತದ ರಾಜಕೀಯ ಅಂದಾಕ್ಷಣ ನಮ್ಮ ಮನದಲ್ಲಿ ಒಂದು ಸಂಚಲನ ಮೂಡುವುದು ಸಹಜ ಜೊತೆಗೆ ಅದೆ ಕ್ಷಣಕ್ಕೆ ಗೊಂದಲವು ಮೂಡುತ್ತದೆ.ಹಾಗೆ ಯಾಕೆಂದರೆ ಪ್ರಸ್ತುತ ಸನ್ನಿವೇಶದಲ್ಲಿ ಯುವಕರು ರಾಜಕೀಯ ಪ್ರವೇಶ ಮಾಡಬೇಕೋ.? ಬೇಡವೋ.? ಎನ್ನುವ ಎರಡು ರೀತಿಯ ಆಯ್ಕೆಗಳು ಕಣ್ಣ ಮುಂದೆ ಹಾದು ಹೋಗುವುದು ಖಂಡಿತ.

Related posts

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

September 19, 2026
ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

September 19, 2026

ಕಾರಣ ಭಾರತದ ರಾಜಕಾರಣವನ್ನ ಒಂದೇ ದೃಷ್ಟಿಯಿಂದ ಜಡ್ಜ್ ಮಾಡವುದು ತುಂಬಾ ಕಠಿಣವಾದ ಕೆಲಸ ಕಾರಣ ತುಂಬಾ ಸಂಕೀರ್ಣತೆಯಿಂದ ಇಲ್ಲಿನ ಸಾಮಾಜಿಕ ವ್ಯವಸ್ಥೆಯು ಕೂಡಿದೆ. ಜಗತ್ತಿನ ಇತರೇ ಹಲವಾರು ದೇಶಗಳ ರಾಜಕಾರಣ ಮತ್ತು ಅಲ್ಲಿನ ವ್ಯವಸ್ಥೆಗಳು ಒಂದೆಡೆಯಾದರೆ, ಭಾರತದ ರಾಜಕಾರಣವೇ ಬೇರೆ ದಿಕ್ಕು-ದಿಸೆ, ರೂಪರೇಶಗಳನ್ನು ಹೊಂದಿದ್ದು ಅದು ಇಲ್ಲಿನ ಬಹುತ್ವದ ಕಾರಣಕ್ಕಾಗಿ ಹಾಗಿದೆ ಎನ್ನುವುದು ಸತ್ಯ. ಭಾರತ ಸ್ವತಂತ್ರವಾದಾಗಿಂದ ಹಲವಾರು ರೀತಿಯ ಮನಸ್ಥಿತಿಯುಳ್ಳ ರಾಜಕಾರಣಿಗಳನ್ನ ನೋಡಿರುವ ನಮಗೆ ಪ್ರಮುಖವಾಗಿ ಎರಡು ರೀತಿಯ ರಾಜಕಾರಣಿಗಳು ಸಾಮಾನ್ಯವಾಗಿ ಕಂಡು ಬರುತ್ತಾರೆ.ಒಂದು ಪ್ರಮಾಣಿಕತೆ ಮತ್ತು ದಕ್ಷ ಆಡಳಿತದಿಂದ ರಾಜಕೀಯ ಮಾಡುವವರಿದ್ದಾರೆ ಇವರು ಜನಗಳಿಗೆ ಏನಾದಾರು ಮಾಡುವ ತುಡಿತ ಹೊಂದಿರುತ್ತಾರೆ, ಇನ್ನೊಂದು ರೀತಿಯವರು ಎಂದರೆ ಅತಿ ಭ್ರಷ್ಟರು, ಒಡೆದಾಳುವರು ಇದ್ದಾರೆ. ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ರೌಡಿಗಳು, ಗೂಂಡಾಗಳು ಕೂಡ ರಾಜಕೀಯಕ್ಕೆ ಲಗ್ಗೆ ಇಟ್ಟಿರುವುದು ನಮ್ಮ ಕಣ್ಣ ಮುಂದಿದೆ ಇವರಿಗೆ ಪ್ರಜ್ಞಾವಂತರೇ ಬೆಂಬಲವಾಗಿ ನಿಂತಿರೋದು ದುರಂತ.

Politics
Politics

ಪ್ರಮಾಣಿಕರೆಲ್ಲ ಮೂಲೆಗುಂಪಾಗಿ ಅಪ್ರಾಮಾಣಿಕರೇ ತುಂಬಿ ತುಳುಕುತ್ತಿರುವ ಇಂತಹ ರಾಜಕಾರಣಕ್ಕೆ ಇಂದಿನ ಯುವ ಸಮೂಹ ಬರಲು ಹಿಂದೇಟು ಹಾಕುತ್ತಿರುವುದಕ್ಕೆ ಜಾತಿ ವ್ಯವಸ್ಥೆ, ಹಣದ ಕೊರತೆ, ರಾಜಕೀಯ ಜ್ಞಾನದ ಕೊರತೆ, ಎದುರಾಳಿಯ ಪ್ರಭಾವ ಸೇರಿದಂತೆ ಹಲವಾರು ಕಾರಣಗಳಿವೆ. ಆದರೆ ದೇಶದ ಕೆಟ್ಟ ಪರಿಸ್ಥಿತಿ ಮತ್ತು ಅಭಿವೃದ್ಧಿ ಬಗ್ಗೆ ಪ್ರಮಾಣಿಕವಾಗಿ ಕನಸು ಕಾಣುವ ಮತ್ತು ಅವುಗಳನ್ನು ಕಾರ್ಯಗತಗೊಳಿಸುವ ಯುವಪಡೆಯ ರಾಜಕೀಯ ಪ್ರವೇಶಕ್ಕೆ ತುಂಬಾ ಸೂಕ್ತವಾದ ಕಾಲವಿದು. ಯಾಕೆಂದರೆ ಭಾರತ ರಾಷ್ಟ್ರ ನಿರ್ಮಾಣದಲ್ಲಿ ರಾಜಕೀಯ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ ನಮ್ಮ ನಗರದಲ್ಲಿ ಒಂದು ಸಣ್ಣ ಗ್ರಂಥಾಲಯದಿಂದ ಹಿಡಿದು ದೊಡ್ಡ ದೊಡ್ಡ ಕಾಮಗಾರಿಗಳಿಗೆ ಅಲ್ಲಿನ ಸ್ಥಳೀಯ ರಾಜಕೀಯ ನಾಯಕರ ಪಾತ್ರ, ಪ್ರಭಾವ & ಸತತ ಪ್ರಯತ್ನ ಬಹಳ ಅತ್ಯವಶ್ಯಕವಾಗಿರುತ್ತದೆ. ಒಂದು ಸಣ್ಣ ಹುಲ್ಲುಕಡ್ಡಿಯು ಅಲ್ಲಾಡೋದಕ್ಕೆ ರಾಜಕೀಯ ಕಮಾಂಡ್ ಬೇಕಾಗಿರುತ್ತದೆ. ಆದ್ದರಿಂದ ವ್ಯವಸ್ಥೆಯ ಬದಲಾವಣೆಯಲ್ಲಿ ರಾಜಕೀಯದ ಅನಿವಾರ್ಯ ಮತ್ತು ಮಹತ್ವವನ್ನು ನಮ್ಮ ಯುವಕರು ಅರಿತು ರಾಜಕೀಯ ರಂಗಕ್ಕೆ ಭಯಭೀತರಾಗದೆ ಪ್ರವೇಶ ಮಾಡುವ ಮೂಲಕ ಭಾರತದ ಸಮಗ್ರ ಏಳಿಗೆಗಾಗಿ ಕಂಕಣ ತೊಡಬೇಕು.

Politics
Politics

ಭಾರತದ ಭಾಗ್ಯವಿಧಾತ ಡಾ.ಬಿ.ಆರ್ ಅಂಬೇಡ್ಕರ್ ವರು ನೀಡಿದ ಸಂವಿಧಾನ ಭಾರತದ ಪ್ರತಿಪ್ರಜೆಗಳಿಗೂ ಹಣವಂತರು ಸ್ಥಿತಿವಂತರು ಅಲ್ಲದ ಸಾಮನ್ಯ ವ್ಯಕ್ತಿಯು ಕೂಡ ದೇಶದ ಅತ್ಯುನ್ನತ ಸ್ಥಾನಕ್ಕೆ ಏರುವ ಅವಕಾಶ ನೀಡಿದೆ. ಆದ ಕಾರಣ ಯುವಕರು ರಾಜಕೀಯ ಪ್ರವೇಶಿಸಿ ಗಾಂಧಿ-ಅಂಬೇಡ್ಕರ್ ಅವರ ಕನಸಿನ ಭಾರತ ನಿರ್ಮಾಣ ಮಾಡುವಲ್ಲಿ ಆಸಕ್ತಿ ವಹಿಸಬೇಕು. ವಿವಿಧತೆಯಲ್ಲಿ ಏಕತೆಯನ್ನ ಕಂಡುಕೊಂಡ ಭಾರತವೂ ಸಂವಿಧಾನದಲ್ಲು ಕೂಡ ಹಲವಾರು ವಿಶೇಷವಾದ ಕಾನೂನುಗಳಿಂದ ಇತರೆ ದೇಶಗಳಿಗಿಂತ ಭಿನ್ನವಾಗಿದೆ.ಇಂತಹ ಪ್ರಜಾಪ್ರಭುತ್ವದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನ ಅಳವಡಿಸಿಕೊಂಡ ಭಾರತದಲ್ಲಿ ಯುವಕರ ಸಂಖ್ಯೆ ಇಡಿ ಏಷ್ಯಾ ಖಂಡಲ್ಲಿಯೇ ಹೆಚ್ಚಾಗಿದೆ. ಭಾರತೀಯ ರಾಜಕಾರಣವೂ ಮುಕ್ತ ಮತದಾನದ ಮೂಲಕ ತನ್ನನ್ನು ಪ್ರತಿನಿಧಿಸುವವರನ್ನು ಆಯ್ಕೆ ಮಾಡುವ ವಿಧಾನವನ್ನ ಅಳವಡಿಸಿಕೊಂಡಿದೆ. ಇಂತಹ ದೇಶದಲ್ಲಿ ಇವತ್ತು ಪರಿಸ್ಥಿತಿ ಹಲವಾರು ರೀತಿಯಲ್ಲಿ ಹದಗೆಟ್ಟು ಹೋಗಿದ್ದು ನಿಂತ ನೀರಾಗಿ ಕೆಟ್ಟು ವಾಸನೆ ಹೊಡೆಯುತ್ತಿದೆ. ಶಾಸಕಾಂಗ, ಕಾರ್ಯಾಂಗ, ಭ್ರಷ್ಟರಿಂದ ತುಂಬಿ ತುಳುಕುತ್ತಿದೆ. ಭಾರತೀಯ ರಾಜಕಾರಣಕ್ಕೆ ಪ್ರಮಾಣಿಕ ಯುವಜನತೆ ಬಂದು ಹೊಸ ಸುಧಾರಣಾ ನೀತಿ ಮಾರ್ಗ ಕಂಡುಕೊಂಡರೆ ಉಳಿದ ಮೂರರಲ್ಲಿ ಭ್ರಷ್ಟತೆಯನ್ನ‌ ನಿಯಂತ್ರಣ ಮಾಡಬಹುದು.

ಶೈಲಜಾ.ಸಿ
ಪತ್ರಿಕೋದ್ಯಮ ವಿಧ್ಯಾರ್ಥಿನಿ
ಬೆಂಗಳೂರು ವಿಶ್ವವಿದ್ಯಾಲಯ

Tags: #Saaksha TVBangalore Universitypolitics
ShareTweetSendShare
Join us on:

Related Posts

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

by Shwetha
September 19, 2026
0

ನಂದಿಗ್ರಾಮ: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರ ನಂದಿಗ್ರಾಮದ ಉಪಚುನಾವಣೆಯಲ್ಲಿ ಈಗ ಅನಿರೀಕ್ಷಿತ ರಾಜಕೀಯ ತಿರುವು ಕಂಡುಬಂದಿದೆ. ತನ್ನ ಬಣದ ಅಭ್ಯರ್ಥಿಯೇ ಕಣದಿಂದ ಹಿಂದೆ ಸರಿದು ಆಘಾತ ನೀಡಿದ...

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

by Shwetha
September 19, 2026
0

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಬರೋಬ್ಬರಿ ₹3...

ಕರ್ನಾಟಕದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ: ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೂ ಸಂಪುಟದ ಕ್ರಮ

ಕರ್ನಾಟಕದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ: ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೂ ಸಂಪುಟದ ಕ್ರಮ

by Shwetha
September 19, 2026
0

ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಕರ್ನಾಟಕ ಸರ್ಕಾರ, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್...

ಮೃತದೇಹದ ಬಳಿ ರೈಲು ಟಿಕೆಟ್ ಸಿಗಲಿಲ್ಲ ಎಂದ ಮಾತ್ರಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾನೆ ಎನ್ನಲಾಗದು: ಹೈಕೋರ್ಟ್

ಮೃತದೇಹದ ಬಳಿ ರೈಲು ಟಿಕೆಟ್ ಸಿಗಲಿಲ್ಲ ಎಂದ ಮಾತ್ರಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾನೆ ಎನ್ನಲಾಗದು: ಹೈಕೋರ್ಟ್

by Shwetha
September 19, 2026
0

ರೈಲು ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕನ ಮೃತದೇಹದ ಬಳಿ ಪ್ರಯಾಣದ ಟಿಕೆಟ್ ಪತ್ತೆಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಆತ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು...

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

by Shwetha
September 19, 2026
0

ಬೆಂಗಳೂರು: ರಾಜ್ಯದಲ್ಲಿ 'ವಂದೇ ಮಾತರಂ' ಗೀತೆಯ ಗಾಯನ ಈಗ ಸರ್ಕಾರ ಮತ್ತು ಹಿಂದುತ್ವನಿಷ್ಠ ನಾಯಕರ ನಡುವಿನ ನೇರ ಸಂಘರ್ಷಕ್ಕೆ ನಾಂದಿ ಹಾಡಿದೆ. ವಂದೇ ಮಾತರಂ ಗೀತೆಯ ಕೇವಲ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram