Congress – ಬೊಮ್ಮಾಯಿ ಅವರೇ ಗತಿಗೆಟ್ಟ ಸರ್ಕಾರ ನಡೆಸಲು ನಾಚಿಕೆ ಎನಿಸುವುದಿಲ್ಲವೇ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಅವಾಂತರ ಮುಂದುವರೆದಿದ್ದು, ಬೆಂಗಳೂರಿನ ಗಂಗಮ್ಮ ಸರ್ಕಲ್ ಹತ್ತಿರ ರಸ್ತೆಗುಂಡಿಗೆ ಬಿದ್ದು ಬೈಕ್ ಸವಾರ ಸಂದೀಪ್ ಎಂಬುವವರ ತಲೆಗೆ ತೀವ್ರ ಪೆಟ್ಟಾಗಿದೆ.
ಇಂತಹ ಪ್ರಕರಣಗಳು ನಗರದಲ್ಲಿ ಪ್ರತಿ ದಿನ ಮರುಕಳಿಸುತ್ತಲೇ ಇದೆ.
ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದು, ರಸ್ತೆ ಗುಂಡಿಗಳಿಗೆ ದಿನಕ್ಕೊಂದು ಹೆಣ ಬೀಳ್ತಿವೆ, ಜನರ ಸಾವುಗಳನ್ನು #40PercentSarkara ಮರದ ಎಲೆಗಳು ಉದುರಿದಂತೆ ಲಘುವಾಗಿ ಪರಿಗಣಿಸಿದೆ.

ಹೈಕೋರ್ಟ್ ಹಲವು ಬಾರಿ ಚಾಟಿ ಬೀಸಿದರೂ ರಸ್ತೆ ಗುಂಡಿಗಳನ್ನ ಮುಚ್ಚದ ಸರ್ಕಾರ ಬಂಡತನದ ಪರಮಾವಧಿಗೆ ತಲುಪಿದೆ ಎಂದು ಕಿಡಿಕಾರಿದೆ.
ಅಲ್ಲದೆ ಬಸವರಾಜ ಬೊಮ್ಮಾಯಿ ಅವರೇ, ಇಂತಹ ಗತಿಗೆಟ್ಟ ಸರ್ಕಾರ ನಡೆಸಲು ನಾಚಿಕೆ ಎನಿಸುವುದಿಲ್ಲವೇ ಎಂದು ಆಕ್ರೋಶ ಹೊರಹಾಕಿದೆ.








