Bagalakote : ತಂದೆಯ ಹತ್ಯೆಗೈದು 30 ತುಂಡು ಮಾಡಿ ಕೊಳವೆ ಬಾವಿಗೆಸೆದ ಪಾಪಿ ಮಗ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಶ್ರದ್ಧಾ ಹತ್ಯಾ ಪ್ರಕರಣದ ಮಾದರಿಯಲ್ಲೇ ಬಾಗಲಕೋಟೆಯಲ್ಲೊಂದು ಘಟನೆ ನಡೆದಿದ್ದು ಇಡೀ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದೆ..
ಬಾಗಲಕೋಟೆಯ ಮುಧೋಳದಲ್ಲಿ ಪಾಪಿ ಮಗನೊಬ್ಬ ತನ್ನ ಸ್ವಂತ ತಂದೆಯನ್ನೇ ಹತ್ಯೆಗೈದು 30 ತುಂಡುಗಳನ್ನ ಕತ್ತರಿಸಿ ಕೊಳವೆ ಬಾವಿಗೆ ಬಿಸಾಡಿದ್ದಾನೆ..
ಪರಶುರಾಮ ಕುಳಲಿ(54)ಕೊಲೆಯಾದ ತಂದೆ..
ಮಗ ವಿಠ್ಠಲ ಕುಳಲಿ(20) ಕೊಲೆ ಮಾಡಿದ ಮಗ..
ರಾಡ್ ನಿಂದ ಹಲ್ಲೆ ಮಾಡಿ ಕೊಲೆ….
ಈತ ಮೊದಲಿಗೆ ತಂದೆಯ ದೇಹವನ್ನ ಕೊಳವೆ ಎಸೆಯಲು ಪ್ರಯತ್ನಿಸಿದ್ದಾನೆ.. ದೇಹ ಕೊಳವೆಬಾವಿಗೆ ಇಳಿಯದೆ ಇದ್ದಾಗ ಕೊಡಲಿಯಿಂದ ತುಂಡು ತಂಡು ಮಾಡಿ ಕೊಳವೆ ಬಾವಿಗೆ ಹಾಕಿದ್ದಾನೆ.
ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮ ಹೊಲದಲ್ಲಿನ ಬೋರ್ ವೆಲ್ ನಲ್ಲಿ ತಂದೆಯ ಮೃತದೇಹದ ತುಂಡುಗಳನ್ನ ಬಿಸಾಡಿದ್ದಾನೆ..
ಕುಡಿದ ಮತ್ತಲ್ಲಿ ತಂದೆ ಮಗನಿಗೆ ಬೈಯೋದು ಹಲ್ಲೆ ಮಾಡೋದು ಹೊಡೆಯೋದು ಮಾಡುತ್ತಿದ್ದರು ಎನ್ನಲಾಗಿದೆ..
ಇದರಿಂದ ಕೋಪಗೊಂಡು ತಂದೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ..
ಪೊಲೀಸರು ಜೆಸಿಬಿಯಿಂಸ ಕೊಳವೆಬಾವಿ ಅಗೆದು ಶವ ಹೊರತೆಗೆದಿದ್ದಾರೆ..
ಮುಧೋಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು , ಹಂತಕ ಮಗನನ್ನ ಬಂಧಿಸಿದ್ದಾರೆ..
Bagalakote , son kills father and chop dead body