Cola Smart Phone : ಶೀಘ್ರದಲ್ಲೇ ಮಾರುಕಟ್ಟೆಗೆ
ಆಕರ್ಶಕ ಫೀಚರ್ಸ್ ಒಳಗೊಂಡಿರೋದಾಗಿ ವರದಿ
ಫೋನ್ ನ ಬ್ಯಾಕ್ ಪ್ಯಾನಲ್ ಶೇರ್ ಮಾಡಿದ ಮುಕುಲ್ ಶರ್ಮಾ
‘Cola phone’ ಬ್ಯಾಕ್ ಪ್ಯಾನಲ್ , ಕ್ಯಾಮೆರಾ ರಿಯಲ್ ಮಿ 10 ನೆನಪಿಸುತ್ತೆ
ಸೈಡ್ ಪವರ್ ಬಟನ್ನಲ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್..??
[Exclusive] Here’s the all new #Cola Phone 😍
Can confirm that the device is launching this quarter in India.
Coca-Cola is collaborating with a smartphone brand for this new phone.
Feel free to retweet.#ColaPhone pic.twitter.com/QraA1EHb6w
— Mukul Sharma (@stufflistings) January 24, 2023
ವಿಶ್ವಾದ್ಯಂತ ಜನಪ್ರಿಯತೆ ಪಡೆದಿರುವ ‘Coco Cola’ ಕಂಪನಿಯು ಇದೀಗ ಹೊಸ Smart Phone ಬಿಡುಗಡೆಗೆ ಸಜ್ಜಾಗಿದೆ..
ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ‘Cola Phone’ ಸಜ್ಜಾಗುತ್ತಿದೆ..
ಅಂದ್ಹಾಗೆ ಈ ಫೋನ್ ಬಗ್ಗೆ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿ ವೈರಲ್ ಆಗ್ತಿದೆ..
ಟಿಪ್ಸ್ಟಾರ್ ಮುಕುಲ್ ಶರ್ಮಾ ಅವರು ತಮ್ಮ ಟ್ವಿಟರ್ನಲ್ಲಿ ಕೋಕಾ-ಕೋಲಾದಿಂದ ಮುಂಬರುವ ಹೊಸ ಫೋನ್ನ ವಿನ್ಯಾಸವನ್ನು ಶೇರ್ ಮಾಡಿದ್ದು,
ಈ ಫೋನ್ ಕೆಂಪು ಬಣ್ಣದ ವೇರಿಯಂಟ್ನಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಫೋಟೋವನ್ನು ನೋಡುವಾಗ ಈ ಫೋನ್ ಹಿಂಭಾಗದ ಪ್ಯಾನೆಲ್ನಲ್ಲಿ ಕೋಕಾ ಕೋಲಾ ಬ್ರ್ಯಾಂಡಿಂಗ್ ಅನ್ನು ದೊಡ್ಡ ಫಾಂಟ್ನಲ್ಲಿ ಬರೆದಿರುವುದನ್ನು ಕಾಣಬಹುದಾಗಿದೆ.
ಅದೇ ರೀತಿ ಕೋಕಾ ಕೋಲಾ ಕಂಪೆನಿಯ ಈ ಸ್ಮಾರ್ಟ್ಫೋನ್ ಇದೇ ತ್ರೈಮಾಸಿಕದಲ್ಲಿ ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದೆ.
ಆನ್ ಲೈನ್ ವರದಿಗಳ ಪ್ರಕಾರ, ಸೋರಿಕೆಯಾದ ರೆಂಡರ್ ನಲ್ಲಿರುವ ಸ್ಮಾರ್ಟ್ಫೋನ್ Realme 10 4G ನಂತೆ ಹೋಲಿಕೆ ಆಗಿದೆ.
Realme….
ಕಳೆದ ವರ್ಷ ನವೆಂಬರ್ ನಲ್ಲಿ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದು 90Hz ನ ರಿಫ್ರೆಶ್ ದರದೊಂದಿಗೆ 6.4-ಇಂಚಿನ ಪೂರ್ಣ HD+ AMOLED ಪರದೆಯನ್ನು ಹೊಂದಿದೆ. ಸ್ಮಾರ್ಟ್ಫೋನ್ MediaTek Helio G99 ಚಿಪ್ಸೆಟ್ನಿಂದ ಚಾಲಿತವಾಗಿದೆ. ಫೋನ್ನ ಪ್ರದರ್ಶನವು ಮೇಲ್ಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರ ಪದರದೊಂದಿಗೆ ಬರುತ್ತದೆ ಮತ್ತು 90.8 ಪ್ರತಿಶತ ಸ್ಕ್ರೀನ್ ಅನುಪಾತವನ್ನು ಹೊಂದಿದೆ.
Cola Phone to enter market soon , mukul sharma tweets in twitter