ಕಾಫಿನಾಡು ಚಿಕ್ಕಮಗಳೂರು ಹೇಳಿಕೇಳಿ ಪ್ರವಾಸಿತಾಣಗಳ ತವರೂರು.. ಮಲೆನಾಡಿನ ಸೊಬಗಿನ ಐಸಿರಿ ಚಿಕ್ಕಮಗಳೂರು.. ಕಾಫಿನಾಡಿನ ಸೌಂದರ್ಯ ಪ್ರವಾಸಿಗರನ್ನ ಮೂಕ ವಿಸ್ಮಿತರನ್ನಾಗಿಸುತ್ತೆ.. ಲೆಕ್ಕವಿಲ್ಲದಷ್ಟು ಪ್ರವಾಸಿತಾಣಗಳು, ಜಲಧಾರೆಗಳು, ಗುಡಿ – ಗೋಪುರಗಳು, ನದಿ –ಕೊಳ್ಳಗಳ ರಮಣೀಯ ನೋಟ ಕಣ್ಣಿಗೆ ಮುದ ನೀಡುತ್ತದೆ. ಪ್ರಕೃತಿಯಲ್ಲಿ ಬೆರೆತು ಪ್ರವಾಸಿಗರು ಮೈರೆಯುತ್ತಾರೆ.
ಅಂತಹದ್ದೇ ಒಂದು ತಾಣ ಕಲ್ಲತ್ತಿಗಿರಿ ಜಲಪಾತ….
ಚಿಕ್ಕಮಗಳೂರಿನಲ್ಲಿನ ತರೀಕೆರೆ ತಾಲೂಕಿನಲ್ಲಿರುವ ಕಲ್ಲತ್ತಿಗಿರಿ ಜಲಪಾತಕ್ಕೆ ಹೋಗುವ ಮಾರ್ಗದುದ್ದಕ್ಕೂ ರಮಣೀಯ ನೋಟ ಕಣ್ಣಿಗೆ ರಸದೌತಣವನ್ನ ನೀಡುತ್ತೆ. ಹಚ್ಚ ಹಸಿರಿನ ಪ್ರಕೃತಿಯ ಸೊಬಗು ನೋಡುಗರನ್ನು ಬೆರಾಗಿಸುತ್ತೆ.
ಗುಡ್ಡದ ತುದಿಯಿಂದ ಹರಿಯುವ ಬೆಟ್ಟದ ಮೇಲೆಯೇ ಹರಿಯುವ ಕಲ್ಲತ್ತಿಗಿರಿ ಜಲಪಾತದ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ.. ಹಾಲ್ನೊರೆಯ ಸದಾ ಕಾಲ ಉಕ್ಕಿ ಹರಿಯುವ ಈ ಜಲಧಾರೆ ಬತ್ತಿದ ಇತಿಹಾಸವೇ ಇಲ್ಲ. ಬೆಟ್ಟ-ಗುಡ್ಡಗಳ ಔಷಧಿ ಶಕ್ತಿಯುಳ್ಳ ಮರ-ಗಿಡಗಳ ನಡುವೆ ಹರಿಯುವ ಈ ನೀರಲ್ಲಿ ಸ್ನಾನ ಮಾಡಿದ್ರೆ ಅನೇಕ ರೋಗ ರುಜುನೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ..
ಈ ಜಲಪಾತದ ಬಳಿ ದತ್ತಾತ್ರೇಯ, ಈಶ್ವರ-ಪಾರ್ವತಿ, ಗಣಪತಿ, ಬೇಲೂರು ಚನ್ನಕೇಶವನ ಜೊತೆ ಶಿಲಾ ಬಾಲಿಕೆಯರ ಉದ್ಭವ ಮೂರ್ತಿಗಳಿವೆ. ಆನೆ ಆಕಾರದಲ್ಲಿರುವ ಈ ಜಲಧಾರೆ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತೆ. ಬೆಟ್ಟದಲ್ಲಿನ ಗುಹೆಯೊಳಗೆ ಉದ್ಭವವಾಗಿರುವ ವೀರಭದ್ರಸ್ವಾಮಿ ದೇವರ ದರ್ಶನ ಪಡೆದ್ರೆ ಕಷ್ಟ ಕಾರ್ಪಣ್ಯಗಳು ದೂರಾಗಿ, ಇಷ್ಟಾರ್ಥಗಳು ಈಡೇರುತ್ತೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಈ ಜಲಪಾತ ಸದಾ ಪ್ರವಾಸಿಗರಿಂದ ತುಂಬಿರುತ್ತೆ.. ವೀಕೆಂಡ್ ಗಳಲ್ಲಂತೂ ಮಕ್ಕಳು , ಫ್ಯಾಮಿಲಿ, ಫ್ರೆಂಡ್ಸ್ , ಯುವಕರು ಬಂದು ಈ ಫಾಲ್ಸ್ ನಲ್ಲಿ ಆಟ ಆಡುತ್ತಾ ಎಂಜಾಯ್ ಮಾಡ್ತಾರೆ. ಗುಡ್ಡದ ಮೇಲಿಂದ ಹರಿಯುವ ಝುಳು ಝುಳು ಫಾಲ್ಸ್ ಒಂದೆಡೆಯಾದ್ರೆಯಾದ್ರೆ ಸುತ್ತಲಿನ ಪ್ರಕೃತಿಯ ರಮಣೀಯ ನೋಟ ನೋಡುಗರಿಗೆ ರಸದೌತಣ ನೀಡುತ್ತೆ. ಈ ತಾಣದಲ್ಲಿ ಮೂಲವೇ ಗೊತ್ತಿಲ್ಲದ ಗಂಗೆ ಜಲಪಾತದ ರೂಪದಲ್ಲಿ ಹರಿಯುತ್ತದೆ. ಹರಿಯುವ ಗಂಗೆ ಪ್ರವಾಸಿಗರನ್ನು ಪುಳಕಿತಗೊಳಿಸುತ್ತದೆ.