ಮೈಸೂರು ಅರಮನೆ ದೀಪಾಲಂಕಾರಕ್ಕೆ ಬ್ರೇಕ್..!
ಮೈಸೂರು : ಕೊರೊನಾ ಎರಡನೇ ಅಲೆ ಹಿನ್ನೆಲೆ ಮೈಸೂರಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿದೆ.
ಪ್ರಮುಖ ಪ್ರವಾಸಿ ತಾಣಗಳಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು, ಅರಮನೆ ದೀಪಾಲಂಕಾರಕ್ಕೆ ಬ್ರೇಕ್ ಹಾಕಲಾಗಿದೆ.
ಸಾರ್ವತ್ರಿಕ ರಜೆ ಹಾಗೂ ಭಾನುವಾರ ಒಂದು ಗಂಟೆಗಳ ಕಾಲ ವಿದ್ಯುತ್ ದೀಪಾಲಂಕಾರ ಇತ್ತು.
ಆದ್ರೆ ಕೊರೊನಾ ನೈಟ್ ಕಫ್ರ್ಯೂ ಹಿನ್ನೆಲೆ ದೀಪಾಲಂಕಾರಕ್ಕೆ ಬ್ರೇಕ್ ಹಾಕಲಾಗಿದೆ.
ಇದಲ್ಲದೆ ಸಂಜೆ ನಡೆಯುತ್ತಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೂ ಬ್ರೇಕ್ ಹಾಕಲಾಗಿದೆ.