ಗರ್ಲ್ ಫ್ರೆಂಡ್ ಮೇಲೆ ಆಕೆಯ ಲವರ್ ಹಾಗೂ ಸ್ನೇಹಿತನಿಂದ 19 ಬಾರಿ ಅತ್ಯಾಚಾರ..!
ಬೆಂಗಳೂರು: ಕಾಮುಕನೋರ್ವ ಮಾಡೆಲ್ ಆಗಿದ್ದ ಯುವತಿಯೊಬ್ಬಳನ್ನ ಪ್ರೀತಿಸುತ್ತಿರುವುದಾಗಿ ನಂಬಿಸಿ, ತನ್ನ ಸ್ನೇಹಿತನ ಜೊತೆಗೂಡಿ 19 ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಮೋದ್ ಎಂಬಾತ ಫೇಸ್ ಬುಕ್ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಆಕೆಯ ಮೊಬೈಲ್ ನಂಬರ್ ಕೂಡ ಪಡೆದಿದ್ದರು. ಇಬ್ಬರೂ ನಿರಂತರ ಸಂಪರ್ಕ ಹೊಂದಿದ್ದರು. ಹೀಗೆ ಇಬ್ಬರ ಪರಿಚಯ ಪ್ರೀತಿಗೆ ತಿರುಗಿದೆ.
ಹೀಗೆ ಒಂದು ದಿನ ಯುವತಿಯನ್ನು ಮಾತನಾಡುವ ನೆಪದಿಂದ ಯಶವಂತಪುರದ ಲಾಡ್ಜ್ ಗೆ ಕರೆಸಿಕೊಂಡಿದ್ದಾನೆ. ಅಲ್ಲೆ ಆಕೆಗೆ ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ಹಾಕಿ ಕುಡಿಸಿದ್ದಾನೆ. ಜ್ಯೂಸ್ ಕುಡಿದ ಯುವತಿ ಪ್ರಜ್ಞೆ ತಪ್ಪಿದ್ದಾಳೆ. ನಂತರ ಕಾಮುಕ ಪ್ರಮೋದ್ ಹಾಗೂ ಆತನ ಸ್ನೇಹಿತ ಧನಂಜಯ್ ಇಬ್ಬರೂ ಸೇರಿ ಅತ್ಯಾಚಾರವೆಸಗಿದ್ದು, ಹುಡುಗಿಯ ಅಶ್ಲೀಲ, ಫೋಟೋಗಳು, ವಿಡಿಯೋಗಳನ್ನೂ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಲಾರಂಭಿಸಿದ್ದಾರೆ.
ಪದೇ ಪದೇ ಯುವತಿಗೆ ಕಾಲ್ ಮಾಡಿ ಖಾಸಗಿ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಆಕೆಯನ್ನ 18 ಬಾರಿ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾರೆ. ಯುವಕರ ಚಿತ್ರಹಿಂಸೆ ತಾಳಲಾರದೇ ಯುತಿ ಯಶವಂತಪುರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದು, ನಾಪತ್ತೆಯಾಗಿರುವ ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.