ipl ಐಪಿಎಲ್ ನೋಡಲು ಅವಕಾಶ ಕೊಡಿ ಎಂದು ಉಪವಾಸ ಕೈದಿಗಳು
ಫರೂಖಾಬಾದ್ : ದೇಶದಲ್ಲಿ ಸದ್ಯ ಐಪಿಎಲ್ ಹಬ್ಬ ಶುರುವಾಗಿದೆ.
ಕೊರೊನಾ ಕಾರಣ ಮೈದಾನದಲ್ಲಿ ಪಂದ್ಯ ನೋಡಲು ನಿರ್ಬಂಧ ಏರಿದ್ದು, ಕ್ರಿಕೆಟ್ ಅಭಿಮಾನಿಗಳು ಮನೆಯಲ್ಲೇ ಕುಳಿತು ಪಂದ್ಯಗಳನ್ನ ವೀಕ್ಷಿಸುತ್ತಿದ್ದಾರೆ.
ಈ ಮಧ್ಯೆ ಫತೇಗಢ ಕೇಂದ್ರ ಕಾರಾಗೃಹದ ಕೈದಿಗಳು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಕೈದಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಕಾಯಿಲೆ ಹಿನ್ನೆಲೆ, ರಾಜ್ಯದ ಎಲ್ಲಾ ಜಿಲ್ಲೆಗಳ ಜೈಲಿನಲ್ಲಿರುವ ಕೈದಿಗಳಿಗೆ ಮನರಂಜನಾ ಸೌಲಭ್ಯ ಒದಗಿಸುವಂತೆ ಸರ್ಕಾರ ನಿರ್ದೇಶಿಸಿತ್ತು.
ಅದಕ್ಕಾಗಿ, ಬ್ಯಾರಕ್ಗಳಲ್ಲಿ ಸ್ಪೀಕರ್ ಅಳವಡಿಸಲಾಗಿದೆ. ಸದ್ಯ ಐಪಿಎಲ್ ಶುರುವಾಗಿದ್ದು, ಫತೇಗಢ ಕೇಂದ್ರ ಜೈಲಿನ ಕೈದಿಗಳು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಐಪಿಎಲ್ ವೀಕ್ಷಣೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.










