athani ಚಪ್ಪಲಿ ಹಿಡಿದು ಬಡಿದಾಡಿಕೊಂಡ ಗ್ರಾಮ ಪಂಚಾಯಿತಿ ಸದಸ್ಯರು
ಅಥಣಿ : ಗ್ರಾಮ ಸಭೆಯಲ್ಲಿ ಸದಸ್ಯರು ಗ್ರಾಮದ ಸಮಸ್ಯೆಗಳನ್ನ ಆಲಿಸುವುದನ್ನ ಬಿಟ್ಟು ಚಪ್ಪಲಿ ಹಿಡಿದು, ಅವಾಚ್ಯ ಪದಗಳಿಂದ ಪರಸ್ಪರ ನಿಂದಿಸಿ ಗಲಾಟೆ ಮಾಡಿಕೊಂಡಿರುವ ಘಟನೆ ಅಥಣಿಯ ಅಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಗ್ರಾಮದ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸುವಾಗ ಗ್ರಾ.ಪಂಚಾಯಿತಿ ಸದಸ್ಯ ಘಟಿವಾಳಪ್ಪ ಗುಡ್ಡಾಪುರ ಎಂಬುವರು ಹಾಗೂ ಇನ್ನೋರ್ವ ಗ್ರಾ.ಪಂ ಸದಸ್ಯರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಈ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.